ಇಂದಿನಿಂದ ಪೊಲೀಸ್ ಕ್ರೀಡಾಕೂಟ
ಬಳ್ಳಾರಿ: ಜಿಲ್ಲಾ ಪೊಲೀಸ್ ಕವಾಯತು ಮೈದಾನ (ಡಿಎಆರ್)ದಲ್ಲಿ ಡಿ. 21ರಿಂದ 23 ರ ವರೆಗೆ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2013 ನಡೆಯಲಿದೆ ಎಂದು ಪೊಲೀಸ್ ಅಧೀಕ್ಷಕ ಡಾ. ಚೇತನ್‌ಸಿಂಗ್ ರಾಥೋಡ್ ತಿಳಿಸಿದ್ದಾರೆ.
ಕ್ರೀಡಾಕೂಟವನ್ನು ಡಿ. 21ರ ಬೆಳಗ್ಗೆ 8.30ಕ್ಕೆ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಉದ್ಘಾಟಿಸಲಿದ್ದು, ಜಿಪಂ ಸಿಇಒ ಎಂ. ಮಂಜುನಾಥ ನಾಯಕ್ ಉಪಸ್ಥಿತರಿರುತ್ತಾರೆ. ಕ್ರೀಡಾಕೂಟದ ಸಮಾರೋಪ ಡಿ. 23ರ ಸಂಜೆ 4.30ಕ್ಕೆ ನಡೆಯಲಿದೆ. ಕ್ರೀಡಾಕೂಟದಲ್ಲಿ 100 ಮೀ ಅಂತಿಮ ಓಟ, ಹಗ್ಗ ಜಗ್ಗುವ ಸ್ಪರ್ಧೆ, ಪಥಸಂಚಲನ ರಿಟ್ರೀಟ್ (ಧ್ವಜ ಅವರೋಹಣ) ನಡೆಯಲಿದೆ. ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ. ಎಸ್. ಪರಶಿವಮೂರ್ತಿ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಮಣಿಕಂಠನ್ ಅವರು ಸಮಾರೋಪದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಕೆ. ಬಾಬಾ ಮತ್ತಿತರರು ಉಪಸ್ಥಿತರಿರುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.