ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಂದಿನಿ ಹಾಲಿನ ಜಾಗೃತಿ ಶಿಬಿರ

Mainashree
Updated On : 22 Dec 2013, 2:37 am

ಬಳ್ಳಾರಿ: ನಗರದ ಹೀರದ ಸೂಗಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಂದಿನಿ ಹಾಲಿನ ಕುರಿತು ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಸುರೇಶ್‌ಕುಮಾರ್ ಮಾತನಾಡಿ, ನಂದಿನಿ ಹಾಲಿನ ಗುಣಮಟ್ಟ, ನಂದಿನಿ ಹಾಲು ಸೇವಿಸುವುದರಿಂದ ಆಗುವ ಪ್ರಯೋಜನಗಳ ಕುರಿತು ಶಾಲಾ ಮಕ್ಕಳಿಗೆ ಮಾಹಿತಿ ನೀಡಿದರು.
ಒಕ್ಕೂಟದ ತಾಂತ್ರಿಕ ಅಧಿಕಾರಿ ಟಿ. ಮಲ್ಲಿಕಾರ್ಜುನ ಮಾತನಾಡಿ, ಖಾಸಗಿ ಡೈರಿಯ ಕಲಬೆರಕೆ ಹಾಲು ಕುಡಿಯುವುದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ಯಾಳ್ಪಿ ಮೇಟಿ ಪಂಪನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆ ಮುಖ್ಯೋಪಾಧ್ಯಾಯ ಸಿ.ಸಿ. ಗಂಗಾಧರಯ್ಯ, ಡಾ. ಸುರೇಶ್‌ಕುಮಾರ್, ಬಿ. ವೆಂಕಟೇಶ್ ರೆಡ್ಡಿ, ಕೆ. ಎರ್ರಿಸ್ವಾಮಿ, ಐ.ಎನ್. ಮುರುಳೀಧರ್, ವಿ. ನಾಗರಾಜಶರ್ಮಾ ಸೇರಿದಂತೆ ಶಾಲೆಯ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement