ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ, ಕೋಚ, ಶಿವಕುಮಾರ್‌ಗೆ ನಾಡೋಜ ಪ್ರದಾನ

Vishwanath S
Updated On : 22 Dec 2013, 12:32 pm

ಬಳ್ಳಾರಿ: ಸುಪ್ರಿಂಕೋರ್ಟ್ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ, ಕನ್ನಡ ಏಕೀಕರಣ ಹೋರಾಟಗಾರ ಕೋ. ಚನ್ನಬಸಪ್ಪ ಹಾಗೂ ಇಸ್ರೋ ಉಪಗ್ರಹ ಚಾಲನಾ ಸಂಸ್ಥೆಯ ನಿರ್ದೇಶಕ, ಕನ್ನಡ ವಿಜ್ಞಾನಿ ಎಸ್.ಕೆ. ಶಿವಕುಮಾರ್ ಅವರಿಗೆ ಶನಿವಾರ ಸಂಜೆ ಹಂಪಿ ಕನ್ನಡ ವಿಶ್ವವಿದ್ಯಾಲಯದ 22ನೇ ನುಡಿಹಬ್ಬದಲ್ಲಿ ನಾಡೋಜ ಗೌರವ ಪದವಿ ನೀಡಿ ಗೌರವಿಸಲಾಯಿತು.
ವಿವಿಯ ದೂರದರ್ಶನ ಕೇಂದ್ರದಿಂದ ಸಾಂಪ್ರದಾಯಿಕವಾಗಿ ಛತ್ರಿ, ಚಾಮರದ ಮೆರವಣಿಗೆ ಮೂಲಕ ನಾಡೋಜ ಗೌರವ ಪದವಿಗೆ ಪಾತ್ರವಾಗಿದ್ದವರನ್ನು ಪೂರ್ಣಕುಂಭದೊಂದಿಗೆ ಅಕ್ಷರ ಗ್ರಂಥಾಲಯಕ್ಕೆ ಕರೆತರಲಾಯಿತು. ರಾಜ್ಯಪಾಲರ ಗೈರು ಹಾಜರಿ ಹಿನ್ನೆಲೆಯಲ್ಲಿ ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅವರು ನಾಡೋಜ ಪದವಿ ಪ್ರದಾನ ಮಾಡಿದರು. ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಕೂಡ ಗೈರು ಹಾಜರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement