ಹಂಪಿ ಉತ್ಸವ: ಕ್ರೀಡಾ ಸ್ಪರ್ಧೆಗಳು
ಬಳ್ಳಾರಿ: ಹಂಪಿ ಉತ್ಸವ 2014ರ ಅಂಗವಾಗಿ ಕ್ರೀಡೆಗಳನ್ನು ಜ. 10ರಿಂದ 12ರ ವರೆಗೆ ಹಮ್ಮಿಕೊಂಡಿದ್ದು, ಆಸಕ್ತರು ಭಾಗವಹಿಸಬಹುದು ಎಂದು ಡಿಸಿ ಬಿಸ್ವಾಸ್ ತಿಳಿಸಿದ್ದಾರೆ.
ದೇಸಿ ಕ್ರೀಡೆಗಳು, ಸ್ಪರ್ಧಿಗಳು: ಮಿಸ್ಟರ್ ಹಂಪಿ ದೇಹದಾರ್ಢ್ಯ ಸ್ಪರ್ಧೆ, ಕಬಡ್ಡಿ, ಕುಸ್ತಿ, ಹಂಪಿ ಕೇಸರಿ, ಹಂಪಿ ಕಿಶೋರ, ಭಾರ ಎತ್ತುವಿಕೆ, ಕಲ್ಲು ಎಸೆತ, ಬಂಡಿ ಚಕ್ರ ಎತ್ತುವಿಕೆ, ಮಲಕಂಬ, ಧ್ವಜಕಂಬ (ಪುರುಷ), ಹಗ್ಗ ಜಗ್ಗುವಿಕೆ (ಮಹಿಳೆ), ಎಳೆದಾಟ ಈ ಸ್ಪರ್ಧೆಗಳು ಕುಸ್ತಿ ಆಖಾಡ ಮೈದಾನದಲ್ಲಿ ನಡೆಯಲಿದೆ.
ಸಾಹಸ ಕ್ರೀಡೆ ಮತ್ತು ಸ್ಪರ್ಧಿಗಳು: ಕಮಲಾಪುರ ಕೆರೆಯಲ್ಲಿ ಮೀನು ಹಿಡಿಯುವ, ದೋಣಿ ಹಾಗೂ ನೀರಿನ ಕ್ರೀಡೆಗಳ ಸ್ಪರ್ಧೆ ನಡೆಯಲಿದೆ. ಎದುರು ಬಸವಣ್ಣ ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ದೇಹದಾರ್ಢ್ಯ ಕ್ರೀಡೆಗಳ ನಡೆಯಲಿವೆ. ಕೊಂಡನಾಯಕನಹಳ್ಳಿ-ವಿಜಯವಿಠಲ ದೇವಸ್ಥಾನದಲ್ಲಿ ಬೈಸಿಕಲ್ (ಗೇರ್‌ನೊಂದಿಗೆ) ಹಾಗೂ ಬೈಸಿಕಲ್ (ಗೇರ್ ರಹಿತ) ಸ್ಪರ್ಧೆಗಳು, ಅಕ್ಕತಂಗಿಯರ ಗುಡ್ಡದ ಎದುರು ಸಾಹಸ ಕ್ರೀಡೆ ಮತ್ತು ಶಿಬಿರ, ರಾಣಿ ಸ್ನಾನಗೃಹ ಎದುರು ಹಂಪಿ ಅರ್ಜುನ-ಬಿಲ್ಲುಗಾರಿಕೆ, ಗಾಳಿಯಲ್ಲಿ ಗುಂಡು ಹಾರಿಸುವಿಕೆ, ಗಾಳಿ ಪಟ ಹಾಗೂ ಬಿಸಿ ಗಾಳಿ ಬಲೂನ್ ಸ್ಪರ್ಧೆಗಳು ನಡೆಯಲಿವೆ. ಅಕ್ಕತಂಗಿಯರ ಗುಡ್ಡ-ಮಾತಂಗ ಪರ್ವತ ಸ್ಥಳದಲ್ಲಿ ಪಾರಂಪರಿಕ ಚಾರಣ, ಮಯೂರ ಭುವನೇಶ್ವರಿಯಲ್ಲಿ ಆಗಸದಿಂದ ಹಂಪಿದರ್ಶನ, ಮಿಕ್ಸ್ ಟ್ರೀಮ್ ಕ್ರೀಡೆ- ರಾಣಿ ಸ್ನಾನಗೃಹದಲ್ಲಿ ಪೇಂಟ್‌ಬಾಲ್ ಅರೇನಾ, ಎಟಿವಿ ಅರೇನಾ ಸ್ಪರ್ಧೆ.
ಹಂಪಿ ವಸ್ತುಪ್ರದರ್ಶನ: ಎದುರು ಬಸವಣ್ಣ ಹತ್ತಿರ ಸಾಂಪ್ರದಾಯಿಕ ಆಹಾರ ಮೇಳ, ಸ್ವಶಕ್ತಿ ಗುಂಪು ಮತ್ತು ಹಂಪಿ ಕಿಚನ್ ಕಿಂಗ್ ಸ್ಪರ್ಧಿಗಳು ಹಾಗೂ ಮುಖ್ಯ ಆಹಾರ ಪ್ರಾಂಗಣ, ಶಿವ ದೇವಸ್ಥಾನ ಹತ್ತಿರ ಸಾರ್ವಜನಿಕ ಆಹಾರ ಪ್ರಾಂಗಣ, ಎದುರು ಬಸವಣ್ಣ ಹತ್ತಿರ ಕರಕುಶಲ ಹಾಗೂ ಕೈಮಗ್ಗ ಮೇಳ, ಹಂಪಿ ವಿಹಂಗಮ, ದೃಶ್ಯ ಮತ್ತು ಹಂಪಿ ಉತ್ಸವದ ಐತಿಹಾಸಿಕ ಫೋಟೋಗ್ರಾಫಿ ಪ್ರದರ್ಶನ, ಹಂಪಿ ಬೈ ಆರ್ಟ್ ಹಾಗೂ ಪುಸ್ತಕ ಮೇಳ, ಕೃಷ್ಣ ದೇವಸ್ಥಾನದ ಹಿಂಭಾಗದಲ್ಲಿ ವಿನೋದ ವಾಣಿಜ್ಯ, ಕೈಗಾರಿಕಾ ಮತ್ತು ಉದ್ಯಮ ಮೇಳ, ವಿನೋದ ಹಂಪಿ ವಿಜ್ಞಾನ ಮತ್ತು ತಾಂತ್ರಿಕ ಪ್ರದರ್ಶನ, ಹಾಗೂ ಸ್ಪರ್ಧೆ ನಡೆಯಲಿದೆ.
ಬಳ್ಳಾರಿ ವಿಜ್ಞಾನ ಕೇಂದ್ರ ವಿನೋದ ವಿಜ್ಞಾನ ಮತ್ತು ಬಾಹ್ಯಾಕಾಶ, ತಾರಾಲಯ, ವಿನೋದ ಭೌತಶಾಸ್ತ್ರ, ವೈದ್ಯಕೀಯ ಮಾದರಿಗಳು, ಚಲನಚಿತ್ರ, ಆರ್ಕೆಡ್ ಆಟಗಳು ಮತ್ತು ಎಕ್‌ಬಾಸ್ ಖಗೋಳ ವಿಜ್ಞಾನ ಹಾಗೂ ನಕ್ಷತ್ರ ವೀಕ್ಷಿಸುವುದು, ತಕ್ಷಣ ಫೋಟೋ ಕರಾವುಕಿ ಸ್ಪರ್ಧೆ, ಎಬಿಸಿಡಿ (ಯಾರಾದರೂ ನೃತ್ಯ ಮಾಡಬಹುದು), ಕುಳಿತು ಚಿತ್ರ ರಚನೆ, ಟೀ-ಶರ್ಟ್ ಮತ್ತು ವಿಜ್ಞಾನ ಸಂಬಂಧಿಸಿದ ನೆನಪಿನ ಕಾಣಿಕೆಗಳು, ಆಹಾರ ಪ್ರಾಂಗಣ-ವಿನೋದ ಹಂಪಿ ಪ್ರದರ್ಶನಗಳು ನಡೆಯಲಿವೆ.
ಹೊರಗಿನಿಂದ ಬಂದ ಸ್ಪರ್ಧಾಳುಗಳಿಗೆ ಸಾಮಾನ್ಯ ವಸತಿ (ಟೆಂಟ್) ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧಾಳುಗಳು ಪ್ರತಿ ಕ್ರೀಡೆಗೆ ಪ್ರವೇಶ ಶುಲ್ಕ ತುಂಬಬೇಕು. ಬಹುಮಾನಗಳನ್ನು ನುರಿತ ಸಮಿತಿ ತೀರ್ಮಾನದಂತೆ ನೀಡಲಾಗುವುದು. ಆಸಕ್ತ ಸ್ಪರ್ಧಿಗಳು ಸಹಾಯಕ ಆಯುಕ್ತರು, ಹೊಸಪೇಟೆ ಹಂಪಿ ಉತ್ಸವ ವಿಭಾಗ ಕಚೇರಿಯಲ್ಲಿ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು. ಹಣ ಪಾವತಿಯನ್ನು ಹುಂಡಿ, ಡೆಪ್ಯುಟಿ ಕಮೀಷನರ್ ಬಳ್ಳಾರಿ ಇವರ ಹೆಸರಿನಲ್ಲಿ ಪಡೆಯತಕ್ಕದ್ದು.