ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಎಸ್ಪಿ ಇಲೆವನ್ ತಂಡಕ್ಕೆ ಗೆಲವು

Vishwanath S
Updated On : 25 Dec 2013, 12:43 pm

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 24
ಜಿಲ್ಲಾ ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟದ ನಿಮಿತ್ತ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ನಡೆದ ಪೊಲೀಸ್ ಮತ್ತು ಪತ್ರಕರ್ತರ ಸ್ನೇಹಮಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಸ್‌ಪಿ ಇಲೆವನ್ ತಂಡ 16 ರನ್‌ಗಳ ಅಂತರದಿಂದ ಗೆಲವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಎಸ್‌ಪಿ ಇಲೆವನ್ ತಂಡ ನಿಗದಿತ 14 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತು. ಪ್ರಾರಂಭಿಕ ಆಟಗಾರರಾಗಿ ಆಗಮಿಸಿದ್ದ ಎಸ್‌ಪಿ ಡಾ. ಚೇತನ್‌ಸಿಂಗ್ ರಾಥೋಡ್, ಗ್ರಾಮೀಣ ಡಿವೈಎಸ್‌ಪಿ ಎನ್. ರುದ್ರಮುನಿ ಉತ್ತಮ ಅಡಿಪಾಯ ಹಾಕಿಕೊಟ್ಟರಲ್ಲದೇ, 14ರನ್ ಗಳಿಸಿದ ಎಸ್‌ಪಿ ರಾಥೋಡ್, ಎಡಗೈ ಸ್ಪಿನ್ನರ್ ರಮೇಶ್ ಬೌಲಿಂಗ್‌ನಲ್ಲಿ ಶರಣು ಹಂಪಿಗೆ ಕ್ಯಾಚಿತ್ತು ಹೊರನಡೆದರು. ಡಿವೈಎಸ್‌ಪಿ ಎನ್. ರುದ್ರಮುನಿ 10 ರನ್‌ಗಳಿಗೆ ಬೊಲ್ಡ್ ಆದರೆ, ಹಬೀಬ್ ಕೇವಲ ಒಂದು ರನ್‌ಗೆ ಹಿಂತಿರುಗಿದರು. ನಂತರ ಕ್ರೀಜಿಗಿಳಿದ ಪಿಎಸ್‌ಐಗಳಾದ ಬಿ. ನಿರಂಜನ್ 30, ಕೃಷ್ಣಾ ನಾಯ್ಕ್ 18, ಸೋಮಶೇಖರ್ 18, ಸಿಪಿಐ ಮಹಾಂತೇಶ್ 3, ಶಿವಾನಂದ ಶೆಟ್ಟಿ 1 ರನ್ ಸೇರಿ 14 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 105 ರನ್ ಕಲೆ ಹಾಕಿತು.
ಪತ್ರಕರ್ತರ ಇಲೆವನ್ ತಂಡದ ಪರ ಆರಂಭಿಕ ಬೌಲಿಂಗ್ ಮಾಡಿದ ಸಿದ್ದಯ್ಯ ಹಿರೇಮಠ್, ಮಧು ಬುಕ್ಕರ್ ತಲಾ ಎರಡು ಓವರ್ ಮಾಡಿ, ವಿಕೆಟ್ ಪಡೆಯದೆ 10, 12 ರನ್‌ಗಳನ್ನು ನೀಡಿದರೆ, ರಮೇಶ್ 2 ಓವರ್‌ಗೆ 11 ರನ್ ನೀಡಿ 2 ವಿಕೆಟ್ ಕಬಳಿಸಿದರು. 3 ಓವರ್‌ಗೆ 31 ರನ್ ನಿಡಿದ ಶರಣು ಹಂಪಿ 1, ಶಶಿಧರ ಮೇಟಿ 2 ಓವರ್‌ಗೆ 5 ರನ್ ನೀಡಿ, 3 ವಿಕೆಟ್ ಪಡೆದು ಉತ್ತಮ ಬೌಲರ್‌ರಾಗಿ ಹೊರಹೊಮ್ಮಿದರು.
ನಂತರ ಬ್ಯಾಟಿಂಗ್ ಆರಂಭಿಸಿದ ಪತ್ರಕರ್ತರ ಇಲೆವೆನ್ ತಂಡದ ಶಶಿಧರ ಮೇಟಿ, ಸಿದ್ದಯ್ಯ ಹಿರೇಮಠ್ ರನ್‌ಗಳನ್ನು ಮಂದಗತಿಯಲ್ಲೇ ಸೇರಿಸಿದರು. ಮೊದಲ 6 ಓವರ್‌ಗೆ 35, 9ನೇ ಓವರ್‌ಗೆ ಕೇವಲ 50 ರನ್‌ಗಳನ್ನು ಕಲೆಹಾಕಿ ಸೋಲಿನ ಕಹಿ ಅನುಭವಿಸಿತು. ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿದ ಶಶಿಧರ ಮೇಟಿ, ಸಿದ್ದಯ್ಯ ಹಿರೇಮಠ್ ತಲಾ 18, 12 ರನ್ ಗಳಿಸಿದ್ದನ್ನು ಹೊರತುಪಡಿಸಿ, ಮಧ್ಯಮ ಕ್ರಮಾಂಕದಲ್ಲಿ ಕೆ.ಎಂ. ಮಂಜುನಾಥ್, ಗಿರೀಶ್, ಬಸವರಾಜ್, ನೂರ್ ಮಹಮ್ಮದ್, ರಮೇಶ್, ಶರಣು ಹಂಪಿ ಎಲ್ಲರೂ ಒಂದಂಕಿ ರನ್‌ಗಳಿಂದ ಪೆವಿಲಿಯನ್ ಪರೇಡ್ ನಡೆಸಿದರು. ಕೊನೆಯಲ್ಲಿ ಮಧು ಬುಕ್ಕರ್ (12), ವೆಂಕೋಬಿ (25) ರನ್ ಗಳಿಸಿದರೂ ಗೆಲುವಿನ ದಡ ಸೇರಿಸಲಿಲ್ಲ. ಅಂತಿಮವಾಗಿ 14 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 90 ರನ್ ಸೇರಿಸುವಲ್ಲಿ ಶಕ್ತರಾದರು. ಇದರೊಂದಿಗೆ ಎಸ್‌ಪಿ ಇಲೆವನ್ ತಂಡ 16 ರನ್‌ಗಳ ಅಂತರದಿಂದ ಜಯ ಗಳಿಸಿತು.
ಎಸ್‌ಪಿ ಇಲೆವನ್ ಪರ ಬೌಲಿಂಗ್ ಮಾಡಿದ ಪಿಎಸ್‌ಐಗಳಾದ ಶಿವಾನಂದ 2 ಓವರ್‌ಗೆ 3 ವಿಕೆಟ್, ಕೃಷ್ಣಾನಾಯ್ಕ್ 2-1, ನಾಗರಾಜ್ 2-16, ಪ್ರಕಾಶ್ 2-15, ನಿರಂಜನ್ 2-2, ಪಿಸಿ ರಮೇಶ್ 2-1 ವಿಕೆಟ್‌ಗಳನ್ನು ಕಬಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement