ಪ್ರಾಮಾಣಿಕತೆಯಿಂದ ಭ್ರಷ್ಟಾಚಾರ ನಿರ್ಮೂಲನೆ: ಗಣೇಶ
ಕನ್ನಡಪ್ರಭ ವಾರ್ತೆ, ಕಂಪ್ಲಿ, ಡಿ. 24
ಸಂಘಟಿತ ಹೋರಾಟ ಮತ್ತು ಪ್ರಾಮಾಣಿಕ ನಡುವಳಿಕೆಯಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದು ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಸ್ಥೆ ರಾಜ್ಯಾಧ್ಯಕ್ಷ ಯು. ಗಣೇಶ್ ತಿಳಿಸಿದರು.
ಸೋಮವಾರ ಕಂಪ್ಲಿ ಸಮೀಪದ ಸುಗೇನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಆವರಣದಲ್ಲಿ ಏರ್ಪಡಿಸಿದ್ದ ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಸ್ಥೆಯ ಸುಗ್ಗೇನಹಳ್ಳಿ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಸಂಘ-ಸಂಸ್ಥೆಗಳಿಂದ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯವಾಗಿದ್ದು, ಪ್ರತಿಯೊಬ್ಬರ ಪ್ರಯತ್ನ ಹಾಗೂ ಅವರ ಪ್ರಾಮಾಣಿಕತೆಯು ಅಗತ್ಯವಾಗಿದೆ ಎಂದರು.
ಮನೆಗೊಬ್ಬ ಮಾಹಿತಿ ಹಕ್ಕು ಕಾರ್ಯಕರ್ತ ಹುಟ್ಟಬೇಕು. ಪ್ರತಿಯೊಬ್ಬರು ಮಾಹಿತಿ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಭ್ರಷ್ಟಾಚಾರ ಮುಕ್ತ ಕರ್ನಾಟಕ ಮಾಡಲು ಮುಂದಾಗಬೇಕೆಂದು ತಿಳಿಸುವುದರ ಮೂಲಕ ನೆರೆದ ಜನತೆಗೆ ಮಾಹಿತಿ ಹಕ್ಕು ಅರ್ಜಿಗಳನ್ನು ಉಚಿತವಾಗಿ ವಿತರಿಸಿದರು. ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಸ್ಥೆ ಗೌರವಾಧ್ಯಕ್ಷ ಎಚ್. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಸುಗ್ಗೇನಹಳ್ಳಿ ಗ್ರಾಮ ಘಟಕ ಅಧ್ಯಕ್ಷ ವಿ.ಬಿ. ಶ್ರೀನಿವಾಸ್, ವಿ. ಹುಲಿಗೇಶ್, ಪಿ. ಜಾಫರ್ ಸಾಬ್, ಎನ್.ದೇವಣ್ಣ, ಎ. ಪಂಪಾ, ಸಿ. ಮರಿಯಪ್ಪ, ಪಿ. ಶರೀಫ್ ಸಾಬ್ ಹಾಗೂ ಸದಸ್ಯರು, ಸಂಘದ ಎ.ಎಂ.ಬಸವರಾಜ್, ಕಿರಣ್ ನಾಗರಾಜ್, ಪಿ. ಅಂಜಿನಿ, ಸದಸ್ಯ ಸೋಮಶೇಖರಯ್ಯ ಪಿ. ಹಿರೇಮಠ್, ಎಸ್. ವೆಂಕೋಬಾ, ಈ. ಈರಣ್ಣ, ಗ್ರಾಮದ ಮುಖಂಡ ಬಿ. ಕರಿಯಪ್ಪ ನಾಯಕ, ವಿ. ಗೋವಿಂದಪ್ಪ, ಪಿ. ಫರಣ್ಣ, ಸಿ. ಯರ್ರಿಸ್ವಾಮಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಿ. ಫಕ್ಕೀರಸಾಬ್ ಇತರರು ಮಾತನಾಡಿದರು.
ಚೈತ್ರ ತಂಡದವರು ಪ್ರಾರ್ಥಿಸಿದರು. ಶಿಕ್ಷಕ ಸಿ. ರಮೇಶ್ ಸ್ವಾಗತಿಸಿ, ನಿರೂಪಿಸಿದರು.