ಬಂಜಾರಾ ಶ್ರಮಜೀವಿಗಳ ಸಮುದಾಯ
ಹೊಸಪೇಟೆ: ಬಂಜಾರಾ ನಾಡನ್ನು ಕಟ್ಟಲು ಶ್ರಮಿಸಿದ ಸಮುದಾಯ. ಅಲ್ಲದೆ, ಶ್ರಮಜೀವಿಗಳ ಸಮುದಾಯವಾಗಿದೆ ಎಂದು ಭಾರತ್ ಬಂಜಾರಾ ಸೇವಾಲಾಲ್ ಸೇನೆಯ ರಾಜ್ಯಾಧ್ಯಕ್ಷ ಅಶ್ವತ್ಥ್ ನಾಯ್ಕ ಹೇಳಿದರು.
ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಸ್ಥಳೀಯ ಬಂಜಾರ್ ಸೇವಾಲಾಲ್ ಸೇನೆ ಮಂಗಳವಾರ ಹಮ್ಮಿಕೊಂಡಿದ್ದ ಬಂಜಾರ್ ಸಮುದಾಯದ ಯುವಕರ ಚಿಂಥನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಂಜಾರ್ ಸಮುದಾಯದವರು ಶ್ರಮ ಜೀವಿಗಳಾಗಿದ್ದು, ಅತ್ಯಂತ ಕಷ್ಟಪಟ್ಟು ದುಡಿದು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಬಂಜಾರ್ ಸಮುದಾಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬಡುವರು ಇದ್ದಾರೆ. ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದ ತಾಂಡಗಳಲ್ಲಿ ಜೀವಿಸುತ್ತಿದ್ದಾರೆ. ಸರ್ಕಾರ ಅವರ ಅಭಿವೃದ್ಧಿಗೆ ಸಮರ್ಪಕವಾದ ಯೋಜನೆಗಳನ್ನು ರೂಪಿಸಬೇಕು ಎಂದರು. ಭಾರತ್ ಬಂಜಾರ ಸೇವಾಲಾಸ್ ಸೇನೆಯ ರಾಜ್ಯ ಕಾರ್ಯದರ್ಶಿ ರವೀಂದ್ರ ನಾಯ್ಕ, ಜಿಲ್ಲಾಧ್ಯಕ್ಷ ಆರ್.ರಾಮ್‌ಜೀ ನಾಯ್ಕ, ತಾಲೂಕಾಧ್ಯಕ್ಷ ಎಲ್. ಸಂತೋಷ್, ಕಾರ್ಯದರ್ಶಿ, ಎಲ್. ಗೋವಿಂದ್, ಮುಖಂಡರಾದ ಈಶ್ವರ ನಾಯ್ಕ, ಭೀಮಾ ನಾಯ್ಕ, ರಮೇಶ್ ನಾಯ್ಕ, ಲಕ್ಷ್ಮಣ್ ನಾಯ್ಕ, ಶಂಕ್ರಪ್ಪ ನಾಯ್ಕ, ವಿನೋದ್, ನಾರಾಯಣ ನಾಯ್ಕ, ಚಂದ್ರಪ್ಪ ಸೇರಿದಂತೆ ಸೀತಾರಾಂ ತಾಂಡಾ, ಕೆರೆ ತಾಂಡಾ, ಕಲ್ಲಹಳ್ಳಿ ತಾಂಡಾ, ನಾಗಲಾಪುರ ತಾಂಡಾ, ಅನಂತಶಯನಗುಡಿಯ ಪಂಡರಾಪುರ ತಾಂಡಾದ ಯುವಕರು ಮತ್ತು ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕ ಸತೀಶ್ ನಾಯ್ಕ ನಿರೂಪಿಸಿದರು.