ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹೂವಿನಹಡಗಲಿ: ಇಂದು ಕ್ರಿಸ್‌ಮಸ್ ಸ್ನೇಹಕೂಟ

Vishwanath S
Updated On : 25 Dec 2013, 12:43 pm

ಹೂವಿನಹಡಗಲಿ: ಪಟ್ಟಣದ ಚರ್ಚ್‌ನಲ್ಲಿ ಕ್ರಿಸ್‌ಮಸ್ ಅಂಗವಾಗಿ ಡಿ. 25ರಂದು ಸರ್ವಧರ್ಮಿಯರ ಸ್ನೇಹಕೂಟ ಆಯೋಜಿಸಲಾಗಿದೆ.
ಡಿ. 25ರ ಬೆಳಗ್ಗೆ 11 ಗಂಟೆಗೆ ಆಡಂಬರದ ಗಾಯನ ಬಲಿಪೂಜೆ ನೆರವೇರಲಿದ್ದು, ಸಂಜೆ 5.30ಕ್ಕೆ ನಡೆಯಲಿರುವ ಸರ್ವಧರ್ಮಿಯರ ಕ್ರಿಸ್‌ಮಸ್ ಸ್ನೇಹಕೂಟವನ್ನು ತಹಸೀಲ್ದಾರ್ ಎ.ಬಿ. ವಿಜಯಕುಮಾರ್ ಉದ್ಘಾಟಿಸುವರು.
ಚರ್ಚ್‌ನ ಧರ್ಮಗುರು ಸಿಲ್ವೆಸ್ಟರ್ ಪಿರೇರಾ ಅಧ್ಯಕ್ಷತೆ ವಹಿಸುವರು. ಕಾಲ್ವಿತಾಂಡದ ತಿಪ್ಪೇಶ್ವರ ಸ್ವಾಮೀಜಿ, ಜಾನಪದ ಪರಿಷತ್ತಿನ ಅಧ್ಯಕ್ಷ ಎಲ್. ಖಾದರ್ ಬಾಷಾ, ವಿಜಯ ಡಿಸೋಜ ಸಮ್ಮುಖ ವಹಿಸುವರು. ಅತಿಥಿಗಳಾಗಿ ಫಾ. ಸಿಪ್ರಿಯನ್ ಫೆರ್ನಾಂಡಿಸ್, ಬಿಇಒ ಜಿ. ಕೊಟ್ರೇಶ, ಮುಖ್ಯಾಧಿಕಾರಿ ಎಂ.ವಿ. ನೂರುಲ್ಲಾಖಾನ್, ಪುರಸಭೆ ಸದಸ್ಯ ಸಂತೋಷ ಜೈನ್, ಸಿಪಿಐ ಪ್ರಕಾಶ್ ರಾಠೋಡ್, ಪಿಎಸ್‌ಐ ಆಂಜನೇಯ, ಮೌಂಟ್ ಕಾರ್ಮೆಲ್ ಶಾಲೆಯ ಪ್ರಕಾಶ್ ತಾಮ್ರೊ, ಅಸ್ಸಿಸಿ ಕಾನ್ವೆಂಟ್ ಶಾಲೆಯ ಸಿಸ್ಟರ್ ಐಡಾ, ಶಿಕ್ಷಕ ಪರಮೇಶ್ವರಯ್ಯ  ಮತ್ತಿತರರುಭಾಗವಹಿಸುವರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ರಾಜೇಶ್ ಡಿಸೋಜ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement