ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸರ್ಕಾರದ ಸೌಲಭ್ಯ ಪಡೆದುಕೊಳ್ಳಿ: ಶಂಕರ್

Vishwanath S
Updated On : 27 Dec 2013, 12:22 pm

ಕನ್ನಡಪ್ರಭ ವಾರ್ತೆ, ಕಂಪ್ಲಿ, ಡಿ. 26 ಸರ್ಕಾರದ ಸೌಲಭ್ಯಗಳನ್ನು ಅಂಗವಿಕಲರು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ಕಂಪಿಲರಾಯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ. ಶಂಕರ್ ತಿಳಿಸಿದರು.
ಇಲ್ಲಿನ ಕಂಪಿಲರಾಯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದಿಂದ ವಿಶ್ವ ಅಂಗವಿಕಲರ ದಿನಾಚರಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಅಂಗವಿಕಲರ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪುರಸಭೆ ಅವರು ಸಂಘದ ಕಚೇರಿ ಕಟ್ಟಡಕ್ಕಾಗಿ ನಿವೇಶನ ನೀಡಬೇಕು. ಅಂಗವಿಕಲರ ಮೀಸಲಾತಿ ಅನ್ವಯ ಅರ್ಹ ಫಲಾನುಭವಿಗಳಿಗೆ ನಿವೇಶನ, ಮನೆಗಳನ್ನು ನೀಡಬೇಕು. ಕಂಪ್ಲಿ ಪಟ್ಟಣದಲ್ಲಿನ 223 ಅಂಗವಿಕಲರು ಸಂಘದಲ್ಲಿ ಸದಸ್ಯತ್ವ ಹೊಂದಿದ್ದಾರೆ. ಇಲ್ಲಿಯ ತನಕ ಪುರಸಭೆ 29 ತ್ರಿಚಕ್ರ ವಾಹನಗಳನ್ನು ಒದಗಿಸಿದೆ. ಇನ್ನೂ 10 ತ್ರಿಚಕ್ರ ವಾಹನಗಳು ಮಂಜೂರಾಗಿದ್ದು, ಇಲ್ಲಿಯವರೆಗೆ ವಿತರಣೆಯಾಗಿಲ್ಲ. ಕೂಡಲೆ ವಿತರಿಸಬೇಕು ಎಂದು ಮನವಿ ಮಾಡಿದರು.
ನಟರಾಜ ಕಲಾ ವಿಜಯ ಸಂಘದಿಂದ ಆರಂಭಗೊಂಡ ಮೆರವಣಿಗೆ ಡಾ. ರಾಜ್‌ಕುಮಾರ್ ಮುಖ್ಯರಸ್ತೆ ಮೂಲಕ ಸಾಗಿ ಕಲ್ಮಠದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯಲ್ಲಿ ಕಂಪಿಲರಾಯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ. ಇಸ್ಮಾಯಿಲ್, ಉಪಾಧ್ಯಕ್ಷ ಬಿ. ಉಮೇಶ್, ಕಾರ್ಯದರ್ಶಿ ಕೆ. ವಾಣಿ, ಖಜಾಂಚಿ ಎನ್.ಎಂ. ವೀರೇಶ್, ಸಂಚಾಲಕ ಎಂ. ಖಾದರ್ ಬಾಷಾ, ಎಚ್.ಪಿ. ಶಿಕಾರಿ ರಾಮು, ರಮೇಶ್ ಹಾಗೂ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement