ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಹಕಾರ ಸಂಘಗಳಚುನಾವಣೆ ಅಧಿಸೂಚನೆ ಪ್ರಕಟ

Vishwanath S
Updated On : 28 Dec 2013, 11:10 am

ಬಳ್ಳಾರಿ: ಅವಧಿ ಮುಗಿದ 7 ಸಾವಿರ ಸಹಕಾರ ಸಂಘಗಳಿಗೆ ಫೆಬ್ರವರಿ ತಿಂಗಳಿನಲ್ಲಿ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಹಕಾರ ಚುನಾವಣೆ ಆಯುಕ್ತ ಎನ್.ಸಿ. ಮುನಿಯಪ್ಪ ತಿಳಿಸಿದರು.  ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 2014ರ ಫೆಬ್ರವರಿ 2, 9, 16, 23 ಮತ್ತು ಮಾರ್ಚ್ 2ರಂದು ಚುನಾವಣೆ ನಡೆಸಲಾಗುವುದು. ಬಳ್ಳಾರಿಯಲ್ಲಿ 292 ಸಹಕಾರ ಸಂಘಗಳಿಗೆ ಚುನಾವಣೆ ನಡೆಸಲಾಗುವುದು. ಒಕ್ಕೂಟಗಳಿಗೆ ಜಿಲ್ಲಾಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಯನ್ನು ನೇಮಕಾತಿ ಮಾಡಲಾಗಿದೆ. ಉಳಿದಂತೆ ಸಹಕಾರ ಸಂಘಗಳಿಗೆ ಸಹಕಾರ ಸಂಘಗಳ ನೋಂದಣಿ ಇಲಾಖೆಯ ಉಪ ನಿಬಂಧಕರನ್ನು ಜಿಲ್ಲಾ ಚುನಾವಣಾಧಿಕಾರಿಯನ್ನಾಗಿ ನೇಮಕಾತಿ ಮಾಡಲಾಗಿದೆ ಎಂದರು. ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗುವುದು. ಚುನಾವಣಾ ಆಯೋಗದ ನಿಯಮದಂತೆ ಈ ಚುನಾವಣಾ ಪ್ರಕ್ರಿಯೆಯೂ ಇರುತ್ತದೆ. ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಚುನಾವಣಾ ನಿಯೋಜಿತರಿಗೆ ಸಿಬ್ಬಂದಿ ಕಾರ್ಯಾಗಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. 5 ವರ್ಷ ಪೂರ್ಣಗೊಂಡ ಸಹಕಾರ ಸಂಘಗಳು ಮಾಹಿತಿ ನೀಡಬೇಕು. ಸಂಬಂಧಿಸಿದವರು ತಿಳಿಸಬೇಕು. ಚುನಾವಣೆಗೆ ಒಳಗಾಗದಿದ್ದರೆ ಆಡಳಿತಾಧಿಕಾರಿಗಳನ್ನು ನೇಮಕಾತಿ ಮಾಡಲಾಗುವುದು. ಪ್ರಸ್ತುತವಾಗಿ 32 ಸಾವಿರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement