ಬಳ್ಳಾರಿ

ಬಳ್ಳಾರಿ: ಮನೆ ಬೀಗ ಮುರಿದು ಕಳ್ಳತನ

ಬಳ್ಳಾರಿ: ಉದ್ಯಮಿಯೋರ್ವರ ಮನೆಯ ಬೀಗ ಮುರಿದ ಕಳ್ಳರು ರು. 6.30 ಲಕ್ಷ ನಗದು ಹಾಗೂ 300 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಗರದ ಕೋಟೆ ಪ್ರದೇಶದಲ್ಲಿ ಶನಿವಾರ ರಾತ್ರಿ ನಡೆದಿದೆ.
ನಗರದ ಉದ್ಯಮಿ ವಿ.ಕೆ. ವಾಸನ್ ಎಂಬುವವರ ಮನೆಯಲ್ಲೇ ಈ ಕಳ್ಳತನ ನಡೆದಿದೆ. ಕುಟುಂಬದ ಸದಸ್ಯರೆಲ್ಲರೂ ತಮಿಳುನಾಡಿನ ಮದುರೈಗೆ ಕೌಟುಂಬಿಕ ಕಾರ್ಯಕ್ರಮಕ್ಕಾಗಿ ಮೂರು ದಿನಗಳ ಹಿಂದೆಯೇ ತೆರಳಿದ್ದರು. ಇದನ್ನು ಗಮನಿಸಿದ ಕಳ್ಳರು, ಶನಿವಾರ ರಾತ್ರಿ ಮನೆಗೆ ನುಗ್ಗಿ ಬೀಗ ಮುರಿದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಆದರೆ, ಬೆಳ್ಳಿ ಸಾಮಗ್ರಿ, ಇತರ ಬೆಲೆ ಬಾಳುವ ವಸ್ತುಗಳು ಇದ್ದರೂ ಅವುಗಳನ್ನು ಕದ್ದಿಲ್ಲ. ಕಳ್ಳರು ಮನೆಯಲ್ಲಿನ ಬಚ್ಚಲಿನಲ್ಲಿ ಚಿನ್ನಾಭರಣಗಳನ್ನು ನೀರಿನಿಂದ ತೊಳೆದುಕೊಂಡು ಹೋಗಿದ್ದಾರೆ. ಮನೆಗೆ ಕಾವಲಿನವನು ಇದ್ದನಾದರೂ ಆತನು ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿದೆ ಎಂದು ಪೊಲೀಸರು ತಿಳಿಸ್ದಿದಾರೆ.
ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ಸಿಬ್ಬಂದಿ ಜತೆ ಭೇಟಿ ನೀಡಿದ ಸಿಪಿಐ ವೈ.ಡಿ. ಅಗಸೀಮನಿ, ಡಿವೈಎಸ್ಪಿ ಮುರುಗಣ್ಣವರ್ ಹಾಗೂ ಸಿಬ್ಬಂದಿ ತೀವ್ರ ಪರಿಶೀಲನೆ ನಡೆಸಿದ್ದಾರೆ. ಮದುರೆಗೆ ತೆರಳಿದ್ದ ಮನೆಯವರು ಭಾನುವಾರ ಮಧ್ಯಾಹ್ನ ವಾಪಸಾಗಿದ್ದು, ವಾಸನ್ ಅವರ ಪುತ್ರ ಡಾ. ರಾಜೀವ್ ಈ ಕುರಿತು ಕೌಲ್‌ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!