ಬಳ್ಳಾರಿ

ಕಮೇಲಾ ಪ್ರದೇಶಕ್ಕೆ ಲಾಡ್ ಭೇಟಿ

ಬಳ್ಳಾರಿ: ರಾಜ್ಯಸಭಾ ಸದಸ್ಯ, ಮುಂದಿನ ಚುನಾವಣೆಯ ಬಳ್ಳಾರಿ ನಗರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿರುವ ಅನಿಲ್‌ಲಾಡ್ ಅವರು ನಗರದ ಕಮೇಲಾ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಜನರೊಂದಿಗೆ ಸಮಾಲೋಚನೆ ನಡೆಸಿ, ಸಮಸ್ಯೆ ಆಲಿಸಿದರು. ಸೋಮವಾರ ನಗರದ 7ನೇ ವಾರ್ಡ್‌ನ ಕಮೇಲಾ ಬೀದಿ ಪ್ರದೇಶಕ್ಕೆ ಭೇಟಿ ನೀಡಿ, ಸಾರ್ವಜನಿಕ ಕುಂದುಕೊರತೆ ಆಲಿಸಿದರು. ಈ ಸಂದರ್ಭ ಅಲ್ಲಿನ ಜನರು ಪಡಿತರ ಚೀಟಿ ವಿತರಣೆಯಲ್ಲಾಗಿರುವ ತೊಂದರೆ, ಕುಡಿಯುವ ನೀರಿನ ಸರಬರಾಜಿನಲ್ಲಾಗುತ್ತಿರುವ ಸಮಸ್ಯೆಗಳು, ವಿದ್ಯುತ್ತಿನ ಕಣ್ಣಾಮುಚ್ಚಾಲೆ ಸೇರಿದಂತೆ ಇತರ ಸಮಸ್ಯೆಗಳ ಕುರಿತಾಗಿ ಮನವಿ ಮಾಡಿದರು. ಕಾಂಗ್ರೆಸ್ ಮುಖಂಡರಾದ ಬಸವರಾಜ್, ಮಾನಯ್ಯ, ರಾಂಪ್ರಸಾದ್, ಬೆಣಕಲ್ ಬಸವರಾಜ್, ಕರುಕುಡಪ್ಪ, ಮಲ್ಲಿಕಾರ್ಜುನ್, ಕಪ್ಪಗಲ್ ರಸ್ತೆ ವಿಕ್ಕಿ, ಬುಜ್ಜಿ ಇದ್ದರು.
ನಾಳೆ 'ಜನತಾದಳ ನಡಿಗೆ ಜನರ ಬಳಿಗೆ'
ಕೊಟ್ಟೂರು: ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಹಗರಿ ನದಿಗೆ ಹರಿಸಬೇಕೆಂದು ಒತ್ತಾಯಿಸಿ ಜೆಡಿಎಸ್ ಹಮ್ಮಿಕೊಂಡಿರುವ 'ಜನತಾದಳ ನಡಿಗೆ ಜನರ ಬಳಿಗೆ' ಫೆ. 6ರಂದು ಕನ್ನಾಕನಹಟ್ಟಿ ಗ್ರಾಮದಿಂದ ಆರಂಭಗೊಳ್ಳಲಿದೆ ಎಂದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜನತಾದಳ ಅಧ್ಯಕ್ಷ ವೈ. ಮಲ್ಲಿಕಾರ್ಜುನ ತಿಳಿಸಿದರು. ಸೋಮವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಡಿಗೆಯಲ್ಲಿ ಕೊಟ್ಟೂರು, ನಂದೀಪುರ, ಮರಿಯಮ್ಮನಹಳ್ಳಿ ಸೇರಿದಂತೆ 9 ಶ್ರೀಗಳು ಪಾಲ್ಗೊಳ್ಳಲ್ಲಿದ್ದು, ಜೆಡಿಎಸ್ ಜಿಲ್ಲಾಧ್ಯಕ್ಷ ನಾ.ರಾ. ಸೂರ್ಯನಾರಾಯಣ ರೆಡ್ಡಿ ಚಾಲನೆ ನೀಡುತ್ತಾರೆ ಎಂದರು. ರಾಜ್ಯ ಸಮಿತಿ ಸದಸ್ಯ ಬನ್ನಿಗೋಳ್ ವೆಂಕಣ್ಣ, ಮಾತಾಗ್ಯಾಸ್ ಯರ್ರಿಸ್ವಾಮಿ, ಎನ್. ಗೋಪಿ, ಅಯ್ಯನಹಳ್ಳಿ ಎಸ್.ಎಸ್. ಸಿದ್ರಾಮಪ್ಪ, ಹರಾಳು ಬಸವನಗೌಡ, ಡಿ.ಶರಣಪ್ಪ, ಸುಬಾನ್‌ಸಾಬ್, ಸಿದ್ದಪ್ಪ, ವೀರೇಶ್ ಉಪಸ್ಥಿತರಿದ್ದರು.
ವಿಶ್ವನಾಥ ನಿಧನ
ಹೂವಿನಹಡಗಲಿ: ತಾಲೂಕಿನ ಶಿವಲಿಂಗನಹಳ್ಳಿಯ ನಿವೃತ್ತ ಶಿಕ್ಷಕ ವಿಶ್ವನಾಥ (64) ಸೋಮವಾರ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!