ಕಾಲುವೆಗೆ ನೀರು: ಧರಣಿ ಅಂತ್ಯ
ಬಳ್ಳಾರಿ: ಎಲ್ಎಲ್ ಕಾಲುವೆಗೆ ಸಮರ್ಪಕ ನೀರು ಬಿಡುವಂತೆ ಒತ್ತಾಯಿಸಿ ಸಿರುಗುಪ್ಪ ರೈತರು ಶಾಸಕ ಸೋಮಲಿಂಗಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಧರಣಿಯನ್ನು ಬುಧವಾರ ಅಂತ್ಯಗೊಳಿಸಲಾಯಿತು. ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಹೋರಾಟವನ್ನು ಸ್ಥಗಿತಗೊಳಿಸಲಾಗುವುದು. ಇನ್ನೆರೆಡು ದಿನಗಳಲ್ಲಿ ಕಾಲುವೆಗೆ ನೀರು ಬರದೇ ಹೋದರೆ ಮತ್ತೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ರೈತರು ತಿಳಿಸಿದ್ದಾರೆ. ಈಗಾಗಲೇ ನೀರು ಬಿಡಲಾಗಿದೆ ಎಂಬ ರಾಜಕೀಯ ನಾಯಕರ ಹೇಳಿಕೆ ರೈತರನ್ನು ಗೊಂದಲಕ್ಕೀಡು ಮಾಡಿದೆ.