ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪ್ರತಿಭಟನೆ ರಾಜಕೀಯ ಪ್ರೇರಿತ

Lingaraj Badiger
Updated On : 7 Feb 2013, 11:31 am

ಹೂವಿನಹಡಗಲಿ: ತುಂಗಭದ್ರಾ ಜಲಾಶಯ ಸಲಹಾ ಸಮಿತಿಯಲ್ಲಿ ನಿರ್ಣಸಿದಂತೆ ಈ ಹಿಂದೆ 550 ಕ್ಯುಸೆಕ್ ನೀರು ಬಿಡಲಾಗಿತ್ತು, ಆದರೆ ಈಗ ಮತ್ತೆ 1100 ಕ್ಯುಸೆಕ್ ನೀರು ಬಿಡುವಂತೆ ಆಗ್ರಹಿಸಿ ಶ್ರೀರಾಮುಲು, ಸೋಮಲಿಂಗಪ್ಪ ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸೂರ್ಯನಾರಾಯಣ ರೆಡ್ಡಿ ಆರೋಪಿಸಿದರು.
ಪಟ್ಟಣದಲ್ಲಿ ಬುಧವಾರ ಕಾರ್ಯಕರ್ತರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರಾ ಜಲಾಶಯ ರಾಜ್ಯದಲ್ಲಿ ನಿರ್ಮಾಣವಾಗಿದ್ದರೂ ನೀರಿನ ಸದ್ಬಳಕೆ ಸರಿಯಾಗಿಲ್ಲ. ಜಲಾಶಯ ತುಂಬಾ ಹೂಳು ತುಂಬಿಕೊಂಡಿದೆ, ಇದರಿಂದ ಹೆಚ್ಚುವರಿ ನೀರು ಆಂಧ್ರದ ಪಾಲಾಗುತ್ತಿದ್ದು, ಇತ್ತ ಬಳ್ಳಾರಿ, ಹೊಸಪೇಟೆ, ಸಿರುಗುಪ್ಪ ಮತ್ತು ಕೊಪ್ಪಳ ಜಿಲ್ಲೆಗಳ ರೈತರು ಪ್ರತಿವರ್ಷ ನೀರಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಆದರಿಂದ ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ-ಆಂಧ್ರ ಸಿಎಂಗಳ ಸಭೆ ಮಾಡಿ ಜಲಾಶಯದ ನೀರಿನ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೇವೆ ಎಂದರು.
ಬಳ್ಳಾರಿ ಜಿಲ್ಲೆಗೆ ಫೆ. 20 ನಂತರ ಮಾಜಿ ಸಿಎಂ ಕುಮಾರಸ್ವಾಮಿ ಭೇಟೆ ನೀಡಲಿದ್ದು, 3 ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ. ಹೂವಿನಹಡಗಲಿ ತಾಲೂಕಿನಲ್ಲಿ ಫೆ. 23ರ ನಂತರ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಇಂದಿಗೂ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಬೆಂಬಲ ಬೇಡಿಲ್ಲ. ಆದರೆ ಈ ರೆಡ್ಡಿ, ಶ್ರೀರಾಮುಲು ಒಂದು ಹೆಜ್ಜೆ ಮುಂದು ಹೋಗಿ ಬಿಜೆಪಿಗೆ ತಮ್ಮ ಬೆಂಬಲವಿದೆ, ಆದರೆ ಡಿಸಿ ಎತ್ತಂಗಡಿ ಮಾಡಬೇಕೆಂದು ಸರ್ಕಾರದ ಮುಂದೆ ಅಹವಾಲು ಇಟ್ಟಿರುವುದು ಬ್ಲಾಕ್‌ಮೇಲ್ ತಂತ್ರವಾಗಿದೆ ಎಂದು ದೂರಿದರು.
ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಮುಂಡರಗಿ ನಾಗರಾಜ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement