ಯುವಕರು ಸಮಾಜಮುಖಿಯಾಗಿ ಸಾಗಲಿ: ಗುಳಿಗಿ ನಾಗಮ್ಮ
ಕೂಡ್ಲಿಗಿ: ಯುವಕರು ದುಶ್ಚಟಗಳ ದಾಸರಾಗದೇ ನಿಸ್ವಾರ್ಥ ಮನೋಭಾವನೆಯಿಂದ ಸಮಾಜಮುಖಿಯಾಗಿ ಬೆಳೆಯುವ ಮೂಲಕ ಆದರ್ಶ ಜೀವನ ನಡೆಸಬೇಕೆಂದು ಜಿಪಂ ಮಾಜಿ ಸದಸ್ಯೆ ನಾಗಮ್ಮ ಗುಳಿಗಿ ನಾಗರಾಜ್ ಹೇಳಿದರು. ಅವರು ತಾಲೂಕಿನ ಹಿರೇಹೆಗ್ಡಾಳ್ ಗ್ರಾಮದಲ್ಲಿ ಡಾ. ವಿಷ್ಣುವರ್ಧನ್ ಸ್ಮರಣಾರ್ಥ ವಿಷ್ಣು ಅಭಿಮಾನಿ ಬಳಗ, ಯುವ ಮುಖಂಡ ಗುಳಿಗಿ ವೀರೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಗ್ರಾಪಂ ಅಧ್ಯಕ್ಷೆ ಶಾಂಭವಿ ಉಜ್ಜಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೊಟ್ರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಜನ್ನು, ಯುವ ಮುಖಂಡ ಗುಳಿಗಿ ವೀರೇಂದ್ರ, ಡಾ. ರವೀಂದ್ರಕುಮಾರ್, ತಾಪಂ ಸದಸ್ಯೆ ಚಕೋರಮ್ಮ, ಸೋಮಪ್ಪ ನಾಯಕ, ಗುಜ್ಜಲ ರಘು, ಚಿರಿಬಿ ಮಂಜುನಾಥ, ವಿಷ್ಣು ಅಭಿಮಾನಿ ಬಳಗದ ಮುಖ್ಯಸ್ಥ ಬಿ.ಎನ್. ಶಿವಯೋಗಿ, ಮುಖ್ಯ ಶಿಕ್ಷಕ ಲಕ್ಷ್ಮಣಸಿಂಗ್ ನಾಯ್ಕ್ ಉಪಸ್ಥಿತರಿದ್ದರು.
ಕೂಡ್ಲಿಗಿ ಡಾ. ರವೀಂದ್ರಕುಮಾರ್, ದಾವಣಗೆರೆ ವೈದ್ಯರಾದ ಡಾ. ನವೀನ್, ಡಾ. ವೆಂಕಟೇಶ್, ಡಾ. ರಾಕೇಶ್, ಹರಪನಹಳ್ಳಿಯ ಡಾ. ಸಂಗೀತಾ, ಹಾಸನದ ಡಾ. ಕೊಟ್ರೇಶ್ ಸೇರಿದ ತಂಡ ನೂರಾರು ಜನರ ಆರೋಗ್ಯ ತಪಾಸಣೆ ನಡೆಸಿತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.