ರಸ್ತೆ ಅಭಿವೃದ್ಧಿ, ಬಸ್ ಸೌಕರ್ಯಕ್ಕೆ ಮನವಿ
ಸಂಡೂರು: ತಾಲೂಕಿನ ಕಾಟಿನಕಂಬ, ಮಲ್ಲಾಪುರ, ಗಿರೇನಳ್ಳಿ, ನಿಡಗುರ್ತಿ ಗ್ರಾಮಗಳ ಮೂಲಕ ಹಾದು ಹೋಗುವ ರಸ್ತೆ ಹದಗೆಟ್ಟಿದ್ದು, ಅಭಿವೃದ್ಧಿಪಡಿಸಬೇಕು. ಈ ಭಾಗದ ಮೂಲಕ ಸಂಚರಿಸುತ್ತಿದ್ದ ಬಸ್ ಸ್ಥಗಿತಗೊಂಡಿದ್ದು, ಅದನ್ನು ಪುನಾರಂಭಿಸಬೇಕು ಎಂದು ಬಿಎಸ್ಸಾರ್ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಗ್ರಾಮಸ್ಥರು ಇತ್ತೀಚೆಗೆ ಹೆದ್ದಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಈ. ಸಂಜಯ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಸಂಡೂರಿಗೆ ಬಂದಿದ್ದ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಜಯ್ ಅವರನ್ನು ಭೇಟಿಯಾದ ಗ್ರಾಮಸ್ಥರು, ನಿಡಗುರ್ತಿ ಹಾಗೂ ಗಿರೇನಳ್ಳಿ ಗ್ರಾಮಗಳಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕು. ತಮ್ಮ ಗ್ರಾಮಗಳಿಂದ ರಾಷ್ಟ್ರೀಯ ಹೆದ್ದಾರಿ 13ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಬಿಎಸ್ಸಾರ್ ಮುಖಂಡರಾದ ಈ. ಮಂಜುನಾಥ್, ಆರ್. ಧನುಂಜಯ, ಹನುಮಂತಪ್ಪ, ಗಿರೇನಳ್ಳಿಯ ಚಂದಪ್ಪ, ಕೆ.ಎಂ. ಸತ್ಯಪ್ಪ, ಹನುಮಂತ, ಗೋವಿಂದಪ್ಪ, ಮಾರೆಪ್ಪ, ಹುಚ್ಚೇನಹಳ್ಳಿಯ ನಾಗರಾಜ, ಮರಿಸ್ವಾಮಿ, ಯರಿಸ್ವಾಮಿ, ನಿಡಗುರ್ತಿಯ ಹನುಮಂತ, ನಾಗರಾಜ, ಗೋವಿಂದ, ಮಲ್ಲಾಪುರದ ಬಸವರಾಜ, ಗುರುಸ್ವಾಮಿ ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.