ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಿದ್ಯಾವಂತ ಯುವಕರಿಂದ ಸಮುದಾಯ ಅಭಿವೃದ್ಧಿ

Parashurama
Updated On : 14 Feb 2013, 12:41 pm

ಹೊಸಪೇಟೆ: ವಾಲ್ಮೀಕಿ ನಾಯಕ ಸಮಾಜದಲ್ಲಿ ಇತ್ತೀಚಿನ ಯುವಕರು ಬಹುತೇಕ ವಿದ್ಯಾವಂತರಾಗುತ್ತಿರುವುದರಿಂದ ಸಮುದಾಯದಲ್ಲಿ ಅಭಿವೃದ್ಧಿಯ ಗಾಳಿ ಬೀಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಆನಂದ್ ಸಿಂಗ್ ಹೇಳಿದರು.
ನಗರದಲ್ಲಿ ಬುಧವಾರ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಮಹರ್ಷಿ ವಾಲ್ಮೀಕಿ ಕಲ್ಯಾಣ ಮಂಟಪ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ನಗರದ ಬಾಣದಕೇರಿ ನಿಜಲಿಂಗಮ್ಮ ದೇವಸ್ಥಾನ, ಉಕ್ಕಡಕೇರಿ ಉಚ್ಚಂಗಿ ಹುಲಿಗೆಮ್ಮ ದೇವಸ್ಥಾನ, ಮ್ಯಾಸಕೇರಿ ಹುಲಿಗೆಮ್ಮ ದೇವಸ್ಥಾನ, ಚಿತ್ರಕೇರಿಯ ತಾಯಮ್ಮ ದೇವಸ್ಥಾನ ಮತ್ತು ವಾಲ್ಮೀಕಿ ಆಶ್ರಮದ ಕಲ್ಲಮ್ಮ ದೇವಿ ದೇವಸ್ಥಾನಕ್ಕೆ ತಲಾ ರು. 10 ಲಕ್ಷ ಹಾಗೂ ನಗರದ ರಾಜ ಮದಕರಿ ನಾಯಕ ವೃತ್ತದಲ್ಲಿ ಮದಕರಿ ನಾಯಕನ ಪುತ್ಥಳಿ ನಿರ್ಮಾಣಕ್ಕೆ ರು. 32 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು. ನಗರದ ಬಳ್ಳಾರಿ ರಸ್ತೆಯ ಅಖಿಲ ಕರ್ನಾಟಕ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ರು. 1 ಕೋಟಿ ವೆಚ್ಚದ ವಾಲ್ಮೀಕಿ ಭವನ ಅಡಿಗಲ್ಲು ಸಮಾರಂಭಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಸ್ವಾಮೀಜಿಗೆ ರು. 18 ಲಕ್ಷ ಮೌಲ್ಯದ ಕಾರೊಂದನ್ನು ಸಚಿವರು ಹಸ್ತಾಂತರಿಸಿದರು. ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಜಂಬಾನಹಳ್ಳಿ ವೆಂಕೋಬಣ್ಣ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್. ಜಂಬಯ್ಯ ನಾಯಕ, ಎಪಿಎಂಸಿ ಅಧ್ಯಕ್ಷ ಗೋಸಲ ಭರಮಪ್ಪ, ತಾಪಂ ಅದ್ಯಕ್ಷೆ ತಾರಿಹಳ್ಳಿ ಹಾಲಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಚಂದ್ರಬಾಬು, ಅನಿತಾ ಆನಂದ್, ಆರ್. ಕೊಟ್ರೇಶ್, ಭವರಲಾಲ್ ನಹರ್, ಎಂ. ಅಮ್ಜಾದ್, ಬಿಇಓ ಪಿ. ಸುನಂದಾ, ನಗರಸಭೆ ಸದಸ್ಯರಾದ ತಳವಾರ ವೆಂಕಟೇಶ್, ಪುಜಾರ ವೆಂಕಟೇಶ್, ಸೋಮಪ್ಪ, ಶಂಕ್ರಮ್ಮ, ದೇವರಮನಿ ಅಂಬಣ್ಣ, ಮರಿಯಮ್ಮನಹಳ್ಳಿ ಸತ್ಯನಾರಾಯಣ, ಸಣ್ಣಕ್ಕಿ ರುದ್ರಪ್ಪ, ಕಂಪ್ಲಿ ವೆಂಕಟೇಶ್ ಭರಮಕ್ಕನವರ್, ಬೈಲುವದ್ದಿಗೇರಿ ಗುಜ್ಜಲ್ ಶ್ರೀನಿವಾಸ ಭಾಗವಹಿಸಿದ್ದರು.
ತಾರಿಹಳ್ಳಿ ವೆಂಕಟೇಶ್ ಸ್ವಾಗತಿಸಿದರು. ಜಿ.ಕೆ. ಹನುಮಂತಪ್ಪ ಪ್ರಾಸ್ತಾವಿಕ ಮಾತನಾಡಿದರು. ಬಂಡೆ ಉಮಾಕಾಂತ ವಂದಿಸಿದರು. ಮ.ಬ. ಸೋಮಣ್ಣ ನಿರೂಪಿಸಿದರು.

13ಎಚ್‌ಪಿಟಿ10-
13ಎಚ್‌ಪಿಟಿ11- ಹೊಸಪೇಟೆ ನಗರದಲ್ಲಿ ಒಂದು ಕೋಟಿ ವೆಚ್ಚದ ವಾಲ್ಮೀಕಿ ಭವನಕ್ಕೆ ಭೂಮಿ ಪೂಜೆಯನ್ನು ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ನೆರವೇರಿಸಿದರು. ಸಚಿವ ಆನಂದ್ ಸಿಂಗ್ ಇದ್ದಾರೆ.
13ಎಚ್‌ಪಿಟಿ12- ಹೊಸಪೇಟೆ ನಗರದಲ್ಲಿ ಬುಧವಾರ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗೆ ರು. 18 ಲಕ್ಷ ಮೌಲ್ಯದ ಕಾರೊಂದನ್ನು ಸಚಿವ ಆನಂದ್ ಸಿಂಗ್ ಹಸ್ತಾಂತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments