ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

2 ಲಕ್ಷ ರೊಟ್ಟಿ ದೇಣಿಗೆ

Parashurama
Updated On : 15 Feb 2013, 12:04 pm

ಕೂಡ್ಲಿಗಿ: ಹಗರಿಬೊಮ್ಮನಹಳ್ಳಿಯ್ಲಲಿ ಫೆ.18ರವರೆಗೆ ನಡೆಯಲಿರುವ ಪಂಚಮಸಾಲಿ ಜಗದ್ಗುರುಗಳ 5ನೇ ವರ್ಷದ ಪೀಠಾರೋಹಣ ಕಾರ್ಯಕ್ರಮಕ್ಕೆ ತಾಲೂಕಿನ ವೀರಶೈವ ಪಂಚಮಸಾಲಿ ಮಹಿಳಾ ಘಟಕದ ವತಿಯಿಂದ 5 ದಿನಗಳ ದಾಸೋಹಕ್ಕಾಗಿ 2 ಲಕ್ಷ ರೊಟ್ಟಿಗಳನ್ನು ಪೂಜೆ ಸಲ್ಲಿಸುವ ಮೂಲಕ ಕಳುಹಿಸಲಾಯಿತು.
ಪೀಠಾರೋಹಣ ಕಾರ್ಯಕ್ರಮದ ಸಲುವಾಗಿ ಪಂಚಮಸಾಲಿ ತಾಲೂಕು ಘಟಕದ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಹೊಸಹಳ್ಳಿ, ಗುಡೇಕೋಟೆ, ಕೂಡ್ಲಿಗಿಯಿಂದ ಉಚಿತ ಬಸ್ ಸೌಕರ್ಯ ಕಲ್ಪಿಸಿದ್ದು, ಹಗರಿಬೊಮ್ಮನಹಳ್ಳಿಯಲ್ಲಿ ನಡೆಯುವ ಪಂಚಮಸಾಲಿ ಸಮಾಜದ ಕಾರ್ಯಕ್ರಮಕ್ಕೆ ಹೋಗುವವರು ಈ ಬಸ್‌ನ ಸದುಪಯೋಗ ಪಡೆಯಬೇಕೆಂದು ಪಂಚಮಸಾಲಿ ಮುಖಂಡರು ತಿಳಿಸಿದ್ದಾರೆ. ಗುಳಿಗಿ ವೀರೇಂದ್ರ, ಕೆ. ಸುನೀಲ ಪಾಟೀಲ, ರಜನಿಕಾಂತ್, ಖಾನಾವಳಿ ಕೊಟ್ರೇಶಪ್ಪ, ಟಿ.ಜಿ. ಮಲ್ಲಿಕಾರ್ಜುನಗೌಡ, ಅಂಗಡಿ ವೀರೇಶ, ಎಂ. ಮರುಳಸಿದ್ದಪ್ಪ, ವಿಭೂತಿ ವೀರಣ್ಣ, ಸೋಗಿ ಗುರುಸಿದ್ದಪ್ಪ, ಬಣಕಾರ ಕೊಟ್ರೇಶ, ಕೆ. ವಿಜಯಕುಮಾರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement