ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜೂಜಾಟ: 22 ಜನರ ಗಡಿಪಾರು

Parashurama
Updated On : 15 Feb 2013, 12:05 pm

ಬಳ್ಳಾರಿ:  ಮಟಕಾ ಜೂಜಾಟ ಆಡುತ್ತಿದ್ದ 22 ಜನರನ್ನು ಗಡಿಪಾರು ಮಾಡಿ ಬಳ್ಳಾರಿ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದು, ಪೊಲೀಸ್ ಇಲಾಖೆ ಗುರುವಾರವೇ ಬಳ್ಳಾರಿ, ಸಂಡೂರು ಹಾಗೂ ಸಿರುಗುಪ್ಪ ತಾಲೂಕಿಗೆ ಸೇರಿದ 22 ಜನರನ್ನು ಗಡಿಪಾರು ಮಾಡಿದೆ.
2011ರಿಂದ 3 ವರ್ಷದಲ್ಲಿ 3ಕ್ಕೂ ಹೆಚ್ಚು ದೂರುಗಳು ಇವರ ಮೇಲೆ ದಾಖಲಾಗಿದ್ದು, ಅವರಿಗೆ 3 ಬಾರಿ ಕೋರ್ಟ್‌ನಿಂದ ಶಿಕ್ಷೆಗೆ ಒಳಪಟ್ಟಿದ್ದರು. ಆದರೂ ಜೂಜಾಟ ಮುಂದುವರಿಸಿದ್ದ ಹಿನ್ನೆಲೆಯಲ್ಲಿ 22 ಜನರನ್ನು ಗಡಿಪಾರು ಮಾಡಬೇಕೆಂದು ಕಳೆದ ವರ್ಷ ಎಸ್ಪಿ ಡಾ. ಚಂದ್ರಗುಪ್ತ ಶಿಫಾರಸ್ಸಿನ ಮೇರೆಗೆ ಬಳ್ಳಾರಿ ಡಿವೈಎಸ್ಪಿ ಬಳ್ಳಾರಿ ಉಪವಿಭಾಗಾಧಿಕಾರಿಗೆ ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಳ್ಳಾರಿ ಉಪವಿಭಾಗಾಧಿಕಾರಿ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
22 ಜನರು: ಬಳ್ಳಾರಿ, ಸಂಡೂರು, ಸಿರುಗುಪ್ಪ ತಾಲೂಕಿನ ಮಟಕಾ ಜೂಜಾಟದ ಹಿನ್ನೆಲೆಯಲ್ಲಿ ಗಡಿಪಾರಾದವರ ವಿವರ ಇಂತಿದೆ. ಬಳ್ಳಾರಿಯ ರಾಣಿತೋಟದ ಚಂದ್ರಕಲಾ, ಮಿಲ್ಲರಪೇಟೆ ಕೆ. ಪ್ರಭು, ಗುಗ್ಗರಹಟ್ಟಿಯ ದೀನ ದಯಾಳ್ ಅಲಿಯಾಸ್ ಶ್ರೀನಿವಾಸ್, ಕೌಲ್‌ಬಜಾರಿನ ಮಹಮ್ಮದ ಇಬ್ರಾಹಿಂ, ಎಂಎಂಟಿಸಿ ಕಾಲೋನಿಯ ಫಕ್ಕೀರಪ್ಪ, ಬಸವರಾಜ್, ಬಸವಂತಪ್ಪ ಅಲಿಯಾಸ್ ವಸಂತ, ಕೌಲ್‌ಬಜಾರ್ ರಂಗಸ್ವಾಮಿ, ಕುರುಗೋಡಿನ ಶ್ರೀನಿವಾಸ ರೆಡ್ಡಿ, ಸಿರುಗುಪ್ಪ ತಾಲೂಕಿನ ರಾಮಾಂಜಿನಿ, ಮಾರೆಪ್ಪ. ಎಚ್., ಹುಸೇನ್ ಸಾಬ್, ವಿ. ಸತ್ಯನಾರಾಯಣ, ಸಂಡೂರು ತಾಲೂಕಿನ ತೋರಣಗಲ್‌ನ ರಾಮಾಂಜಿನಿ, ಸಂಡೂರು ಎಂ. ಬಶೀರ್, ವಡ್ಡು ಗ್ರಾಮದ ಫಕ್ಕೀರಪ್ಪ, ಎನ್‌ಎಂಡಿಸಿ ದೋಣಿ ಮಲೈನ ಪ್ಯಾರಿಜಾನ್, ಕುರೇಕುಪ್ಪದ ಹಾವಿನಾಳ್ ಪಂಪನಗೌಡ, ವಡ್ಡು ಗ್ರಾಮದ ಅಲ್ಲಪ್ಪ, ಕೃಷ್ಣಾನಗರದ ಗುರುಸಿದ್ದಪ್ಪ, ದರೋಜಿ ಗ್ರಾಮದ ಕೆ. ರೇವಣ್ಣ ರೆಡ್ಡಿ, ತೋರಣಗಲ್ ದತ್ತ ಅಲಿಯಾಸ್ ದತ್ತಾತ್ರೇಯ, ಚಳ್ಳಗುರ್ಕಿಯ ಕುಬೇರ, ಅಂಜಿನಿ ಅವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಈ ಬಗ್ಗೆ ಎಸ್ಪಿ ಚಂದ್ರಗುಪ್ತರನ್ನು 'ಕನ್ನಡಪ್ರಭ' ಸಂಪರ್ಕಿಸಿದಾಗ, ಮಟಕಾ ಜೂಜಾಟದಲ್ಲಿ ತೊಡಗಿದ್ದ ಇವರನ್ನು ಗಡಿಪಾರು ಮಾಡುವಂತೆ ಉಪವಿಭಾಗಾಧಿಕಾರಿ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ 22 ಜನರನ್ನು ಗಡಿಪಾರು ಮಾಡಿದೆ. ಯಾವ ಜಿಲ್ಲೆಗೆ ಗಡಿಪಾರು ಮಾಡಲಾಗಿದೆಯೋ ಅಲ್ಲಿಯ ಠಾಣೆಗೆ ಮಾಹಿತಿ ನೀಡಿದೆ. ಗಡಿಪಾರು ಆಗಿರುವವರು ಪ್ರತಿನಿತ್ಯ ಅಲ್ಲಿನ ಪೊಲೀಸ್ ಠಾಣೆಗೆ ಹೋಗಿ ಸಹಿ ಮಾಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಹೊಸಪೇಟೆ ಉಪವಿಭಾಗದಿಕಾರಿಗಳು ಆದೇಶ ಬಂದ ಬಳಿಕ ಉಳಿದ ಹೊಸಪೇಟೆ ಉಪವಿಭಾಗದ ಕೆಲವರನ್ನು ಗಡಿಪಾರು ಮಾಡಲಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement