ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

94 ಅತಿಸೂಕ್ಷ್ಮ ಮತಗಟ್ಟೆ: ಎಸ್ಪಿ ಚಂದ್ರಗುಪ್ತಾ

Mainashree
Updated On : 20 Feb 2013, 11:02 am

ಬಳ್ಳಾರಿ: ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ 94 ಮತಗಟ್ಟೆಗಳು ಅತಿಸೂಕ್ಷ್ಮ, 64 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.  ಪ್ರತಿ ಹತ್ತು ಬೂತ್‌ಗಳಿಗೆ ಮೇಲುಸ್ತುವಾರಿಗೆ ಒಂದು ತಂಡ, ಇಂತಹ 3 ತಂಡಗಳ ಮೇಲೆ ಸಿಪಿಐ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಲಾಗಿದೆ. ಇದರ ಮೇಲೆ ಡಿವೈಎಸ್ಪಿ ನೇತೃತ್ವದ ಒಂದು ತಂಡ ರಚನೆ ಮಾಡಲಾಗಿದೆ. ಭದ್ರತೆಗಾಗಿ ಒಟ್ಟಾರೆ 3000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ಡಾ. ಚಂದ್ರಗುಪ್ತಾ ತಿಳಿಸಿದ್ದಾರೆ.
ಡಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಭದ್ರತೆ ಹಿನ್ನೆಲೆಯಲ್ಲಿ 8 ಪ್ಯಾರಾ ಮಿಲಿಟರಿ ಫೋರ್ಸ್ ಆಗಮಿಸಲಿವೆ. 17 ಡಿಎಆರ್, 10 ಕೆಎಸ್‌ಆರ್‌ಪಿ ತಂಡಗಳನ್ನು ನಿಯೋಜಿಸಲಾಗುತ್ತದೆ. ಹೋಂಗಾರ್ಡ್ ವ್ಯವಸ್ಥೆ ಮಾಡಲಾಗಿದೆ. 30 ಚೆಕ್‌ಪೋಸ್ಟ್ ವ್ಯವಸ್ಥೆ ಮಾಡಲಾಗುತ್ತದೆ. ಆಂಧ್ರಪ್ರದೇಶದಿಂದ ಬರುವ ವಾಹನಗಳ ಹಾಗೂ ಜನರ ಬಗ್ಗೆ ಚೆಕ್‌ಪೋಸ್ಟ್‌ನಲ್ಲಿ ನಿಗಾವಹಿಸಲಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಕ್ಲಸ್ಟರ್ ಮಟ್ಟದ ಮತದಾನ ಕೇಂದ್ರದಲ್ಲಿ ವಿಡಿಯೋ ಚಿತ್ರಣ ವ್ಯವಸ್ಥೆ ಮಾಡಲಾಗುತ್ತದೆ. ಪ್ರಚಾರದ ಸಂದರ್ಭದಲ್ಲಿ ಒಂದು ದಿನದ ಪೂರ್ವದಲ್ಲಿಯೇ ಅನುಮತಿ ಪಡೆದುಕೊಳ್ಳಬೇಕು ಎಂದರು.
ನಾಮಪತ್ರ, ಪ್ರಚಾರ ಸಂದರ್ಭದಲ್ಲಿ 150ಕ್ಕೂ ಹೆಚ್ಚು ಜನರು ಸಾರ್ವಜನಿಕ ಸ್ಥಳದಲ್ಲಿ ಮೆರವಣಿಗೆ ಹೋಗುವಂತಿಲ್ಲ. ಧ್ವನಿವರ್ಧಕ, ವಾಹನಗಳ ಮೇಲೆ ರಾಜಕೀಯ ಚಿಹ್ನೆಗಳನ್ನು ಅಳವಡಿಸಿ ಪರವಾನಗಿ ಇಲ್ಲದೆ ಪ್ರಚಾರ ನಡೆಸುವಂತಿಲ್ಲ, ಪ್ರಚಾರದ ಕುರಿತು ಸಂಬಂಧಪಟ್ಟ ಠಾಣೆಗೆ ಮಾಹಿತಿ ನೀಡಬೇಕು, ಮೂರು ಪಕ್ಷಗಳು ಏಕಕಾಲದಲ್ಲಿ ಪ್ರಚಾರಕ್ಕೆ ಹೋಗದಿರಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಮುಂಜಾಗ್ರತೆಗಾಗಿ ಕೆಲವರನ್ನು ಬಂಧಿಸಲಾಗುತ್ತದೆ. 28 ಅಧಿಕಾರಿಗಳನ್ನು ಖರ್ಚು ವೆಚ್ಚದ ಮೇಲೆ ನಿಗಾವಹಿಸಲು ನಿಯೋಜಿಸಲಾಗಿದೆ.  ಬೈಕ್ ರ್ಯಾಲಿಗೆ ಅವಕಾಶ ನೀಡುವುದಿಲ್ಲ, ಮತದಾರರಿಗೆ ಆಮಿಷ,  ಒತ್ತಡ ಹಾಕದಂತೆ ಕ್ರಮ ಕೈಗೊಳ್ಳಲಾಗುವುದೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement