ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೆಜೆಪಿ ಸಮಾವೇಶ: ವೇದಿಕೆ ತೆರವು

Mainashree
Updated On : 20 Feb 2013, 11:02 am

ಕಂಪ್ಲಿ: ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಹೊಸ ಬಸ್ ನಿಲ್ದಾಣದ ಹಿಂಭಾಗದಲ್ಲಿ ಫೆ. 20ರಂದು ಕೆಜೆಪಿ ಪಕ್ಷ ಆಯೋಜಿಸಿದ್ದ ಕಾರ್ಯಕರ್ತರ ಹಾಗೂ ಮುಖಂಡರ ಸಮಾವೇಶದ ವೇದಿಕೆ ನಿರ್ಮಾಣಕ್ಕೆ ಪುರಸಭೆಯಿಂದ ಪರವಾನಗಿ ಪಡೆದಿಲ್ಲ ಎಂದು ಹೇಳಿ ಹೊಸಪೇಟೆ ಸಹಾಯಕ ಆಯುಕ್ತ ಡಿ.ಆರ್. ಅಶೋಕ ವೇದಿಕೆಯನ್ನು ತೆರವುಗೊಳಿಸಲು ಮುಂದಾದಾಗ ಪಕ್ಷದ ಮುಖಂಡರು ಮತ್ತು ಎಸಿ ಮಧ್ಯೆ ಮಂಗಳವಾರ ಮಾತಿನ ಚಕಮಕಿ ನಡೆದಿದೆ.
ಮಾಜಿ ಸಿಎಂ ಯಡಿಯೂರಪ್ಪ ಪಾಲ್ಗೊಳ್ಳಲಿರುವ ಈ ಸಮಾವೇಶದ ವೇದಿಕೆಯನ್ನು ತೆರವುಗೊಳಿಸಲು ಮುಂದಾದ ಎಸಿಯವರ ಕ್ರಮವನ್ನು ಮಾಜಿ ಶಾಸಕ ಎಚ್. ಡಿ. ಬಸವರಾಜ್ ಹಾಗೂ ಪಕ್ಷದ ಕಾರ್ಯಕರ್ತರು ತೀವ್ರವಾಗಿ ಖಂಡಿಸಿ, ಎಸಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ಫೆ. 16ರಂದೇ ಸಮಾವೇಶದ ಕುರಿತು ಡಸಿ ಹಾಗೂ ಸ್ಥಳೀಯ ಪುರಸಭೆಗೆ ಮನವಿ ಮಾಡಿ, ಮಾಹಿತಿಯನ್ನೂ ನೀಡಿದ್ದೇನೆ. ಆದರೂ ನೀವು ಈ ಕ್ರಮ ತೆಗೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಬಸವರಾಜ್ ಎಸಿ ವಿರುದ್ಧ ಹರಿಹಾಯ್ದರು. ನಂತರ ಡಿಸಿ ಹಾಗೂ ಎಸ್ಪಿಯೊಂದಿಗೆ ಚರ್ಚಿಸಿದ ಎಸಿ ಮತ್ತು ಮಾಜಿ ಶಾಸಕ ಬಸವರಾಜ್ ವೇದಿಕೆಯನ್ನು ತೆರವುಗೊಳಿಸಿ, ಪಟ್ಟಣದ ಶಾರದಾ ಶಾಲಾ ಆವರಣದಲ್ಲಿ ಸಮಾವೇಶ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement