ಬಸವಣ್ಣನಿಂದ ಸಾಮಾಜಿಕ ನೆಲೆಗಟ್ಟಿನ ವಿಶ್ಲೇಷಣೆ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಫೆ. 27
ಸಾಮಾಜಿಕ ನೆಲೆಗಟ್ಟನ್ನು ವಿಶ್ಲೇಷಣೆ ಮಾಡಿದ ದಾರ್ಶನಿಕ ಬಸವಣ್ಣ, ಸಮಾಜದ ಮುಖ್ಯವಾಹಿನಿಯಿಂದ ದೂರ ಸರಿದಿದ್ದ ಅಸಹಾಯಕರಿಗೆ ಆಸರೆಯಾಗಿ ನೊಂದವರು, ಶೋಷಿತರಿಗೆ ಸಾಮಾಜಿನ ನ್ಯಾಯ ಕೊಡಿಸಲು ಮುಂದಾಗಿ ಇಂದಿಗೂ ಪ್ರಸ್ತುತವೆನಿಸುತ್ತಾರೆ ಎಂದು ಬಿಇಓ ಮಂಜುನಾಥ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಪಟ್ಟಣದ ಹೊರವಲಯದ ಜ್ಞಾನಮಂಟಪ ಕಾಲೇಜು ರಂಗಸಜ್ಜಿಕೆಯಲ್ಲಿ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎಚ್.ಎಂ. ಮಲ್ಲಿಕಾರ್ಜುನಸ್ವಾಮಿ ವಿರಚಿತ ಬಸವ ಬಾರಯ್ಯ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು.
ಸಾನ್ನಿಧ್ಯವಹಿಸಿ ಮಾತನಾಡಿದ ಗಂಗಾವತಿ ತಾಲೂಕು ಅರಳಿಹಳ್ಳಿ ಶ್ರೀರಾಜರಾಜೇಶ್ವರಿ ಬೃಹನ್ಮಠದ ಗವಿಸಿದ್ದೇಶ್ವರ ಶ್ರೀ, ದೇಶ, ರಾಜ್ಯಗಳನ್ನು ಆಳುವವರ ಸ್ವಹಿತಾಸಕ್ತಿಯಿಂದ ಅನೇಕ ಜಟಿಲ ಸಮಸ್ಯೆಗಳು ಜೀವಂತವಾಗಿವೆ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು, ಕಾಯಕ, ದಾಸೋಹ ಕಾರ್ಯ ಕೈಗೊಳ್ಳುವ ಮೂಲಕ ನುಡಿದಂತೆ ನಡೆಯುತ್ತಿದ್ದರು. ಆದರೆ, ಪ್ರಸ್ತುತ ಸಮಾಜದಲ್ಲಿ ಹೆಚ್ಚಾಗಿ ನುಡಿಯಲ್ಲಿ ಜಾಣರು, ನಡೆಯಲ್ಲಿ ಕಿರಾತಕರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ರಂಗಚಿತ್ತಾರ ತಂಡದಿಂದ ಬಸವ ಬಾರಯ್ಯ ನಾಟಕದ ಪ್ರಥಮ ಪ್ರಯೋಗ ಜ್ಞಾನಮಂಟಪ ಕಾಲೇಜು ರಂಗಸಜ್ಜಿಕೆಯಲ್ಲಿ ನಡೆಯಿತು.
ಕೊಟ್ಟೂರು ಎಪಿಎಂಸಿ ಅಧ್ಯಕ್ಷ ಜರ್ಮಲಿ ಶಶಿಧರ, ನಾಟಕದ ರಚನೆಕಾರ ಎಚ್.ಎಂ. ಮಲ್ಲಿಕಾರ್ಜುನಸ್ವಾಮಿ, ನಾಟಕ ನಿರ್ದೇಶಕ ಶಿವನಾಯಕ ದೊರೆ, ಜಿಪಂ ಸದಸ್ಯ ಕೆ.ಎಂ. ಶಶಿಧರ, ಎಚ್.ಬಿ. ಹಳ್ಳಿ ಬಿಇಓ ರಾಮನಗೌಡ, ದಾವಣಗರೆ ಸಿಡಿಪಿಓ ಎಂ.ಎಂ. ಮಂಜುನಾಥಸ್ವಾಮಿ, ತಾಲೂಕು ಸಮನ್ವಯಾಧಿಕಾರಿ ಮೈಲೇಶ್ ಬೇವೂರ, ಬಣವಿಕಲ್ ಎಪಿಎಂಸಿ ಸದಸ್ಯ ನಾಗರಾಜ, ವಾಣಿ ನಾಗರಾಜ್, ಜೆಡಿಎಸ್ ತಾಲೂಕಾಧ್ಯಕ್ಷ ಶಿವಣ್ಣ ಸಾಲುಮನಿ, ಗುಂಡುಮುಣುಗು ತಿಪ್ಪೇಸ್ವಾಮಿ, ಉರುಕೊಳ್ಳಿ ಮಂಜುನಾಥ, ಎನ್.ಎಂ. ರವಿಕುಮಾರ್, ಸೋಮಣ್ಣ, ನಾಗನಗೌಡ ಇದ್ದರು. ಗೀತಾ ರ್ಪ್ರ್ಙಾಸಿದರು. ಪ್ರದೀಪ್ಕುಮಾರ್ ಸ್ವಾಗತಿಸಿದರು, ಶಿಕ್ಷಕ ಪ್ರಕಾಶ್ ಮತ್ತಿಹಳ್ಳಿ ನಿರೂಪಿಸಿದರು. ಸಿದ್ದಾರಾಧ್ಯ ವಂದಿಸಿದರು.