ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಂಡೂರು ಪುರಸಭೆ: 81 ಅಭ್ಯರ್ಥಿಗಳು ಕಣದಲ್ಲಿ

Rashmi Kasaragodu
Updated On : 28 Feb 2013, 11:10 am

ಸಂಡೂರು: ಸಂಡೂರು ಪುರಸಭೆಗೆ ನಡೆಯಲಿರುವ ಚುನಾವಣೆಗೆ ಒಟ್ಟು 88 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾದ ಬುಧವಾರ 7 ಅಭ್ಯರ್ಥಿಗಳು (ಬಿಜೆಪಿಯ ಒಬ್ಬರು, ಬಿಎಸ್‌ಆರ್ ಕಾಂಗ್ರೆಸ್‌ನ 6) ನಾಮಪತ್ರ ಹಿಂಪಡೆದಿದ್ದಾರೆ. ಒಟ್ಟು 81 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಸಂಡೂರು ಪುರಸಭೆಯ 7ನೇ ವಾರ್ಡ್‌ನಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಕೆ. ಶಂಭುಲಿಂಗ ಅವರಿಗೆ ನೀಡಲಾಗಿದ್ದ ಜಾತಿ ಹಾಗೂ ಪ್ರವರ್ಗ ಪ್ರಮಾಣಪತ್ರವನ್ನು ಅಸಿಂಧುಗೊಳಿಸಿ ತಹಸೀಲ್ದಾರ್ ಹೊರಡಿಸಿದ್ದ ಆದೇಶಕ್ಕೆ ಸಹಾಯಕ ಆಯುಕ್ತರು ತಡೆಯಾಜ್ಞೆ ನೀಡಿರುವುದರಿಂದ, ಕೆ. ಶಂಭುಲಿಂಗ ಅವರು ಸಲ್ಲಿಸಿದ ನಾಮಪತ್ರವೂ ಸ್ವೀಕೃತವಾಗಿದೆ. ಸಹಾಯಕ ಆಯುಕ್ತರು ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ತಡೆಯಾಜ್ಞೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement