ಸೇತುವೆಗೆ ಅಡ್ಡಲಾಗಿ ನಿಂತ ಲಾರಿ
ಕಂಪ್ಲಿ: ಗಂಗಾವತಿಯಿಂದ ಕಂಪ್ಲಿ ಕಡೆಗೆ ಬರುತ್ತಿದ್ದ ಲಾರಿಯೊಂದು ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ಸೇತುವೆ ಮೇಲೆ ರಸ್ತೆಗೆ ಅಡ್ಡಲಾಗಿ ನಿಂತಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಸೇತುವೆ ಮೇಲೆ ಲಾರಿಯನ್ನು ಕಾರೊಂದು ಓವರ್ಟೇಕ್ ಮಾಡಿದ ಸಂದರ್ಭದಲ್ಲಿ ಲಾರಿ ಚಾಲಕ ಕೂಡಲೇ ಬ್ರೇಕ್ ಹಾಕಿದ್ದಾನೆ. ಇದರಿಂದಾಗಿ ಲಾರಿ ಸೇತುವೆ ಮೇಲೆ ತಿರುಗಿ ಅಡ್ಡಲಾಗಿ ನಿಂತಿದೆ. ಲಾರಿ ಚಾಲಕ ನದಿಗೆ ಹಾರಿ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾನೆ. ಲಾರಿ ನದಿಗೆ ಬೀಳುವುದನ್ನು ತಪ್ಪಿಸಿದ್ದಾನೆ. ಈ ಘಟನೆಯಿಂದ ಕೆಲ ಗಂಟೆಗಳವರೆಗೆ ವಾಹನ ಮತ್ತು ಜನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಸಿಪಿಐ ಆರ್. ಹನುಮಂತಪ್ಪ, ಪಿಎಸ್ಐ ಎನ್. ಆನಂದ ಹಾಗೂ ಸಿಬ್ಬಂದಿ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ, ಜೆಸಿಬಿ ಮೂಲಕ ಲಾರಿಯನ್ನು ತೆರವುಗೊಳಿಸಿ, ವಾಹನ ಮತ್ತು ಜನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.