ಲಂಚ ಸ್ವೀಕಾರ: ಅಧಿಕಾರಿಗೆ 2 ವರ್ಷ ಶಿಕ್ಷೆ
ಬಳ್ಳಾರಿ: ಲಂಚ ಸ್ವೀಕರಿಸಿದ ಅಪರಾಧಕ್ಕಾಗಿ ಬಳ್ಳಾರಿ ಪಾರ್ವತಿ ನಗರದಲ್ಲಿರುವ ಎಲೆಕ್ಟ್ರಿಕಲ್ ಕಚೇರಿ (ಶಕ್ತಿ ನರ್ಸಿಂಗ್ ಹೋಂ ಬಳಿ)ಯ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಕೆ. ಚಂದ್ರಶೇಖರ ರೆಡ್ಡಿ ಅವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ಅವರು 2 ವರ್ಷ ಶಿಕ್ಷೆ ಮತ್ತು ರು. 10 ಸಾವಿರ ದಂಡ ವಿಧಿಸಿ ಫೆ. 27ರಂದು ತೀರ್ಪು ನೀಡಿದ್ದಾರೆ. ಕೆ. ಚಂದ್ರಶೇಖರ್ ರೆಡ್ಡಿ ಅವರು 2006ರಲ್ಲಿ ಎಲೆಕ್ಟ್ರಿಕಲ್ ಗುತ್ತಿಗೆದಾರ ಎಚ್. ಷಣ್ಮುಖಪ್ಪ ಅವರಿಂದ ರು. 10 ಸಾವಿರ ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಪೊಲೀಸರ ದಾಳಿಗೆ ಸಿಕ್ಕಿಬಿದ್ದಿದ್ದರು. ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಕೆ.ಎಂ. ಬಸವರಾಜಪ್ಪ ಅವರು ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದರು. ಸರ್ಕಾರಿ ಅಭಿಯೋಜಕ ಬಿ.ವಿ. ಬಸವರಾಜ ವಾದ ಮಂಡಿಸಿದ್ದರು ಎಂದು ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಜಿ.ಎಸ್. ಹೆಬ್ಬಾಳ್ ತಿಳಿಸಿದ್ದಾರೆ.