ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅನ್ಯರಿಂದ ಉಸ್ತುವಾರಿ ನಿರ್ವಹಣೆ: ಆರೋಪ

Mainashree
Updated On : 26 Jan 2013, 10:50 am

ಕೂಡ್ಲಿಗಿ: ತಾಲೂಕಿನ ಸೂಲದಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಉಸ್ತುವಾರಿಯನ್ನು ನಿರ್ದೇಶಕರೊಬ್ಬರು ನಿರ್ವಹಿಸಿ ಕಾರ್ಯದರ್ಶಿಗೆ ಕಿಮ್ಮತ್ತಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆಂದು ಕೃಷಿ ಪತ್ತಿನ ನಿರ್ದೇಶಕ ಎಂ.ಎಸ್. ಹನುಮಂತಪ್ಪ ಆರೋಪ ಮಾಡಿದ್ದಾರೆ. ನಿರ್ದೇಶಕ ಸಿದ್ದಪ್ಪ ಎಂಬುವವರು ಸಹಕಾರ ಸಂಘದ ಸಿಬ್ಬಂದಿಯಲ್ಲ, ನಿರ್ದೇಶಕ ಮಾತ್ರ. ಆದರೆ ಗ್ರಾಮಕ್ಕೆ ಬರುವ ಪಡಿತರ ಧಾನ್ಯ ಮತ್ತು ಸೀಮೆಎಣ್ಣೆ ವಿತರಿಸುವ ಸಂಪೂರ್ಣ ಜವಾಬ್ದಾರಿ ಹೊಂದಿದ್ದಾರೆ. ಸುಮಾರು 15 ವರ್ಷಗಳಿಂದ ಸಂಘದಲ್ಲಿ ಹೆಚ್ಚು ಪ್ರಬಲತೆ ಸಾಧಿಸಿ, ಸಂಘದಿಂದ ವಿತರಿಸುವ ಗೊಬ್ಬರ, ಬೀಜ, ಅಕ್ಕಿ, ಸಕ್ಕರೆ, ಸೀಮೆಎಣ್ಣೆಯನ್ನು ಇವರೇ ವಿತರಿಸುವ ಪದ್ದತಿ ಅಳವಡಿಸಿಕೊಂಡಿದ್ದಾರೆ. ಅಲ್ಲದೇ, ಗ್ರಾಮದ ಜನತೆಗೆ ವಿತರಿಸಲೆಂದು ಕಳೆದ ಎಂಟು ದಿನಗಳ ಹಿಂದೆಯೇ ಬಂದಿರುವ ಪಡಿತರವನ್ನು ವಿತರಿಸದೇ ಗೋದಾಮಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಇದರಿಂದ ಬಡಜನತೆಗೆ ತುಂಬಾ ತೊಂದರೆಯಾಗಿದೆ. ಕೇವಲ ಮೂರು ದಿನಗಳು ಮಾತ್ರ ಪಡಿತರ ವಿತರಿಸಿ, ಮಿಕ್ಕಿದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಜನತೆಗೆ ಮೋಸಮಾಡಿದಂತಾಗುತ್ತದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement