ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗಣರಾಜ್ಯೋತ್ಸವ: ಇಂದು ವಿವಿಧ ಕಾರ್ಯಕ್ರಮ (ಸುದ್ದಿ ಸಂಕ್ಷೇಪ)

Mainashree
Updated On : 26 Jan 2013, 10:49 am

ಹೊಸಪೇಟೆ: 64ನೇ ಗಣರಾಜ್ಯೋತ್ಸವ ದಿನಾಚರಣೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ಜ. 26ರ ಬೆಳಗ್ಗೆ 9ಕ್ಕೆ ನಡೆಯಲಿದೆ. ಸಹಾಯಕ ಆಯುಕ್ತ ಡಾ೤ ಡಿ.ಆರ್. ಅಶೋಕ್ ಧ್ವಜಾರೋಹಣ ನೆರವೇರಿಸುವರು. ಸಚಿವ ಬಿ.ಎಸ್. ಆನಂದ್ ಸಿಂಗ್ ಅಧ್ಯಕ್ಷತೆ ವಹಿಸುವರು. ಜಿಪಂ ಅಧ್ಯಕ್ಷೆ ಸುಮಂಗಳಮ್ಮ ಗುಬಾಜಿ, ಸಂಸದರಾದ ಜೆ. ಶಾಂತಾ, ಶಿವರಾಮಗೌಡ, ರಾಜ್ಯಸಭಾ ಸದಸ್ಯ ಅನಿಲ್ ಎಚ್. ಲಾಡ್, ಶಾಸಕರಾದ ಟಿ.ಎಚ್. ಸುರೇಶ್ ಬಾಬು, ಕೆ. ನೇಮಿರಾಜ್ ನಾಯ್ಕ, ಮೃತ್ಯುಂಜಯ ಜಿನಗಾ, ಶಶೀಲ್ ನಮೋಶಿ, ಅಮರನಾಥ ಪಾಟೀಲ್, ನ್ಯಾಯಾಧೀಶರಾದ ಬಿ.ಎಸ್. ನಾಯಿಕ, ಮಾರುತಿ ಎಸ್. ಬಾಗಡೆ, ಪುಂಡಲೀಕ ಹೊಸಮನೆ, ಕೃಷ್ಣಪ್ರಸಾದ್ ರಾವ್ ಕಲ್ಮಾಡಿ, ಬಾಳಪ್ಪ ಅಣ್ಣಪ್ಪ ಜರಗು, ಆರ್. ಕೊಟ್ರೇಶ್, ತಾರೀಹಳ್ಳಿ ಹಾಲಮ್ಮ, ಎಂ. ಅಮ್ಜದ್, ಗೋಸಲ ಭರಮಪ್ಪ, ಅನಂತ ಪದ್ಮನಾಭ, ರಶ್ಮಿ ಬಿ. ಪರಡ್ಡಿ, ಬಸವರಾಜ್ ಸೋಮಣ್ಣನವರ್, ಕೆ. ರಂಗಸ್ವಾಮಿ, ಪಿ. ಸುನಂದಾ ಭಾಗವಹಿಸುವರು.

ಆಕಸ್ಮಿಕ ಅಗ್ನಿಗೆ ಮೆಕ್ಕೆಜೋಳ ರಾಶಿ ಆಹುತಿ
ಕೊಟ್ಟೂರು: ಆಕಸ್ಮಿಕ ಅಗ್ನಿ ಅನಾಹುತಕ್ಕೆ ಮೂವರು ರೈತರಿಗೆ ಸೇರಿದ ರು. 75 ಸಾವಿರ ಮೌಲ್ಯದ ಮೆಕ್ಕೆಜೋಳದ ತೆನೆಯ ರಾಶಿ ಭಸ್ಮವಾದ ಘಟನೆ ಸಮೀಪದ ಮಂಗನಹಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ. ರಾತ್ರಿ 12.30ರ ಸುಮಾರಿಗೆ ಸಂಭವಿಸಿದ ಆಕಸ್ಮಿಕ ಬೆಂಕಿಗೆ ಮಂಗನಹಳ್ಳಿ ಕಣವೊಂದರಲ್ಲಿ ಅರಸಪ್ಳ ನಾಗರಾಜ, ಕರಿಯಪ್ಪ, ಹರಿಜನ ಭೀಮಪ್ಪ ಎಂಬ ರೈತರ ಮೆಕ್ಕಜೋಳದ ತೆನೆಯ ರಾಶಿ ಆಹುತಿಯಾಗಿದೆ. ಹಠಾತ್ತನೆ ಕಾಣಿಸಿದ ಬೆಂಕಿಯ ಕೆನ್ನಾಲಿಗೆಗೆ ಮೆಕ್ಕೆಜೋಳದ ತೆನೆಯ ರಾಶಿ ಕ್ಷಣ ಮಾತ್ರದಲ್ಲಿ ಭಸ್ಮವಾಯಿತು. ಸ್ಥಳಕ್ಕಾಗಮಿಸಿದ ಕೊಟ್ಟೂರು, ಕೂಡ್ಲಿಗಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸಿದರು. ಕಂದಾಯ ಪರಿವೀಕ್ಷಕ ಸೋಮನಗೌಡ, ಗ್ರಾಮಲೆಕ್ಕಿಗೆ ಸೌಭಾಗ್ಯ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement