ಬಳ್ಳಾರಿ ಐಎಂಎಗೆ ರಾಷ್ಟ್ರೀಯ ಪ್ರಶಸ್ತಿ ಗರಿ
ಬಳ್ಳಾರಿ: ವೈದ್ಯಕೀಯ ಸಾಧನೆಗೆ ಇಲ್ಲಿನ ಐಎಂಎ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದು, ಬಳ್ಳಾರಿ ವೈದ್ಯಕೀಯ ಕ್ಷೇತ್ರದಲ್ಲೂ ಛಾಪು ಮೂಡಿಸಿದೆ.
ಭಾರತೀಯ ವೈದ್ಯಕೀಯ ಸಂಘದ ಬಳ್ಳಾರಿ ಶಾಖೆ 35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಡಾ. ಸಿ.ಎಲ್. ಜಾವೇರಿ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟಿದೆ. ಬಳ್ಳಾರಿಯ ಭಾರತೀಯ ವೈದ್ಯಸಂಘ 2011-12ನೇ ಸಾಲಿನಲ್ಲಿ ಕುಟುಂಬ ಯೋಜನೆ ಹಾಗೂ ವೈದ್ಯಕೀಯ, ಸಾಮಾಜಿಕ ಚಟುವಟಿಕೆ ರೂಪಿಸಿದ್ದಕ್ಕಾಗಿ ಈ ಪ್ರಶಸ್ತಿಗೆ ಭಾಜನವಾಗಿದೆ.
ಐಎಂಎಯ ಪ್ರಮುಖ ಪ್ರಶಸ್ತಿ ಇದಾಗಿದ್ದು, 1977-78ರಿಂದ ಇದನ್ನು ಕೊಡಲಾಗುತ್ತಿದೆ. 26ನೇ ಈ ಪ್ರಶಸ್ತಿ ರಾಜ್ಯಕ್ಕೆ ದೊರಕಿರುವುದು ಇದೇ ಮೊದಲು.
ಭಾರತೀಯ ವೈದ್ಯಕೀಯ ಸಂಘದ ಬಳ್ಳಾರಿ ಶಾಖೆ 2011-12ನೇ ಸಾಲಿನಲ್ಲಿ ಕುಟುಂಬ ಯೋಜನೆ ಹಾಗೂ ಆರೋಗ್ಯ ಜಾಗೃತಿಗಾಗಿ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ, ಏಡ್ಸ್ ಜಾಗೃತಿ, ಆರೋಗ್ಯ ಅರಿವು - ಹೀಗೆ 54 ಕಾರ್ಯಕ್ರಮಗಳನ್ನು ರೂಪಿಸಿತ್ತು. ಇದು ಫಲಕ ಹಾಗೂ 50 ಸಾವಿರ ನಗದನ್ನು ಒಳಗೊಂಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.