ಬಳ್ಳಾರಿ

ಶಿಕ್ಷಕರ ಮಾಸಿಕ ಕಾರ್ಯಾಗಾರ

ಕೂಡ್ಲಿಗಿ: ದೇಶದಲ್ಲಿ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರ ಪಾತ್ರ ಹಿರಿದಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚಿನ ಆಸ್ಥೆ ವಹಿಸುವುದೇ ಪ್ರಗತಿಗೆ ಪೂರಕ ಎಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಾವಿತ್ರಮ್ಮ ವೀರಭದ್ರಪ್ಪ ಹೇಳಿದರು. ತಾಲೂಕಿನ ಚಂದ್ರಶೇಖರಪುರ ಕ್ಲಸ್ಟರ್ ವತಿಯಿಂದ ಶಿಕ್ಷಕರ ಮಾಸಿಕ ಕಾರ್ಯಾಗಾರ ಹಾಗೂ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಸೇನಾನಿಗಳ ಹುತಾತ್ಮರನ್ನು ಸ್ಮರಿಸುವುದರ ಜತೆಗೆ ಅವರ ದೇಶಾಭಿಮಾನ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯದಂತಾಗಲಿ ಎಂದರು. ಶಿಕ್ಷಣ ಸಂಯೋಜಕ ಚಕ್ರಪಾಣಿ ಆಚಾರ್ ಮಾತನಾಡಿದರು. ಸಿಆರ್‌ಪಿ ಕೆ. ಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಶ್ಯಾಂಸುಂದರ್ ಸಫಾರೆ, ಕೂಡ್ಲಿಗಿ ಸಿಆರ್‌ಪಿ ಷಣ್ಮುಖಪ್ಪ, ಮುಖ್ಯಶಿಕ್ಷಕ ಭರತೇಶ್, ಎಚ್.ಎನ್. ಮೈಲಾರಪ್ಪ, ಕೆಮಿಯಾನಾಯ್ಕ, ಇಂದ್ರಮ್ಮ, ಶಶಿರೇಖಾ, ಮುದ್ದಣ್ಣ, ಕೊಟ್ರಪ್ಪ, ಕುಬೇಂದ್ರನಾಯ್ಕ, ಬಿ.ಕೆ. ಹಿರೇಮಠ್, ಪೃಥ್ವಿರಾಜ್, ಎ. ಗಂಗಪ್ಪ ಇದ್ದರು. ಇದೇ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಚಕ್ರಪಾಣಿ ಆಚಾರ ಅವರನ್ನು ಸನ್ಮಾನಿಸಲಾಯಿತು. ಕೆ. ಲಿಂಗಪ್ಪ ಸ್ವಾಗತಿಸಿದರು, ನಾಗರಾಜ ನಿರೂಪಿಸಿದರು, ಎಂ.ಎಸ್. ಗೋಪಾಲನಾಯ್ಕ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!