ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಆಧಾರ್ ನೋಂದಣಿ: 3 ಹೆಚ್ಚುವರಿ ಕೌಂಟರ್

Lingaraj Badiger
Updated On : 2 Jul 2013, 11:08 am

ಕೊಟ್ಟೂರು: ಆಧಾರ್ ಕಾರ್ಡ್‌ಗೆ ಹೆಸರು ನೋಂದಾಯಿಸಲು ಕಂಡುಬಂದ ಜನದಟ್ಟಣೆ ತಗ್ಗಿಸಲು ಪಟ್ಟಣದಲ್ಲಿ 3 ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲಾಗಿದೆ. ಶನಿವಾರದಿಂದಲೆ ಪಪಂ ಕಚೇರಿ ಅಧ್ಯಕ್ಷರ ಕೊಠಡಿಯಲ್ಲಿ ಕೌಂಟರ್ ತೆರೆಯಲಾಗಿದ್ದು, ಭಾನುವಾರ ನೋಂದಣಿ ಕಾರ್ಯ ಮುಂದುವರೆದಿದ್ದರಿಂದ ಜನತೆ ಉತ್ಸಾಹದಿಂದ ಹೆಸರು ನೋಂದಾಯಿಸಲು ಆಗಮಿಸಿದ್ದರು. ಪಟ್ಟಣದ ಮುಖ್ಯ ಅಂಚೆ ಕಚೇರಿಯಲ್ಲಿ ಮಾತ್ರ ಕಳೆದ 3 ತಿಂಗಳನಿಂದ ಕೌಂಟರ್ ತೆರೆದು ಆಧಾರ್ ಕಾರ್ಡ್ ನೋಂದಾಯಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು. ನೋಂದಣಿಗೆ ಜನತೆ ಹಗಲು ರಾತ್ರಿಯೆನ್ನದೇ ಮುಗಿ ಬೀಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚವರಿ ಕೌಂಟರ್ ತೆರೆಯಬೇಕೆಂಬ ಬೇಡಿಕೆ ಇಲ್ಲಿನ ಜನ ಮಂಡಿಸಿದ್ದರು. ಬೇಡಿಕೆಗೆ ಸ್ಪಂದಿಸಿರುವ ಜಿಲ್ಲಾಡಳಿತ ಬಳ್ಳಾರಿಯ ಸವೆರನ್ ಕಂಪನಿ ಮೂಲಕ ಆಧಾರ್ ನೋಂದಣಿಗೆ ಹೆಚ್ಚುವರಿ ಕೌಂಟರ್‌ಗಳನ್ನು ತೆರೆದಿದೆ. ಪ್ರತಿ ಕೌಂಟರ್‌ನಲ್ಲಿ ತಲಾ 40 ಜನರಂತೆ ದಿನಕ್ಕೆ 120 ಜನರನ್ನು ಇಲ್ಲಿನ ಪಪಂ ಕೌಂಟರ್‌ಗಳಲ್ಲಿ ನೋಂದಾಯಿಸಿಕೊಳ್ಳಲಾಗುತ್ತಿದೆ. ಪ್ರತಿದಿನ ಬೆಳಗ್ಗೆ ಅರ್ಜಿಗಳನ್ನು ನೀಡಲಾಗುತ್ತಿದೆ. ಹೆಚ್ಚುವರಿ ಕೌಂಟರ್‌ಗಳ ಆರಂಭದಿಂದಾಗಿ ಪಟ್ಟಣದ ಜನತೆ ಇದೀಗ ನಿಟ್ಟುಸಿರು ಬಿಡತೊಡಗಿದ್ದಾರೆ. ಪಟ್ಟಣದ ಜನರಿಗೆ ಆದಾರ್ ನೋಂದಣಿಯನ್ನು ಮತ್ತಷ್ಟು ಸುಲಭೀಕರಿಸಲು ಶೀಘ್ರದಲ್ಲೇ ಮತ್ತೆ ಮೂರು ಕೌಂಟರ್‌ಗಳನ್ನು ತೆರೆಯುವ ತಯಾರಿ ನಡೆದಿದೆ. ಸ್ಥಳೀಯ ಪಪಂ ಆಡಳಿತ ಈ ಸಂಬಂಧ ಸ್ಥಳಾವಕಾಶ ಒದಗಿಸಿದರೆ ಕೌಂಟರ್‌ಗಳನ್ನು ತೆರೆಯಲು ಸಿದ್ಧ ಎಂದು ಸವೆರನ್ ಕಂಪನಿ ಪ್ರತಿನಿಧಿ ಪ್ರಕಾಶ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement