ಐಟಿಐ ಕಾಲೇಜು ಪ್ರಾಚಾರ್ಯರಿಗೆ ಕಾರ್ಮಿಕ ಸಚಿವರ ತರಾಟೆ
ಹೂವಿನಹಡಗಲಿ: ಸರ್ಕಾರಿ ಐಟಿಐ ಕಾಲೇಜುಗಳಿಗೆ ಅಧುನಿಕ ಸ್ಪರ್ಶ ನೀಡುವ ಉದ್ದೇಶ ಹೊಂದಿರುವ ಕಾರ್ಮಿಕ ಪಿ.ಟಿ. ಪರಮೇಶ್ವರ್‌ನಾಯ್ಕಅವರಿಗೆ ಹೂವಿನಹಡಗಲಿ ಸರ್ಕಾರಿ ಐಟಿಐ ಕಾಲೇಜಿನ ತುಕ್ಕು ಹಿಡಿದ ಯಂತ್ರಗಳೇ ಸ್ವಾಗತಿಸಿದವು.
ಇಲ್ಲಿನ ಸರ್ಕಾರಿ ಐಟಿಐ ಕಾಲೇಜಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾ, ಕಾಲೇಜಿನ ತರಗತಿಯೊಳಗೆ ಹೆಜ್ಜೆ ಹಾಕುತ್ತಿದ್ದಂತೆಯೇ ತುಕ್ಕು ಹಿಡಿದ ಯಂತ್ರಗಳನ್ನು ಕಂಡು ಪ್ರಾಚಾರ್ಯರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಸರ್ಕಾರ ಕೋಟ್ಯಂತರ ರು.ಗಳ ವೆಚ್ಚ ಮಾಡಿ ಯಂತ್ರಗಳನ್ನು ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ, ಇವುಗಳನ್ನು ಸಕಾಲದಲ್ಲಿ ಸದ್ಭಳಕೆ ಮಾಡಿಕೊಳ್ಳದೇ ತುಕ್ಕು ಹಿಡಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.
ಇದೇ ಸಂದರ್ಭ ವಿದ್ಯಾರ್ಥಿಗಳ ಜೊತೆಗೆ ಚರ್ಚೆ ನಡೆಸಿದರು. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಮಸ್ಯೆ ಆಲಿಸಿದರು. ಜು. 10 ಅನಂತರ ಮತ್ತೆ ಕಾಲೇಜಿಗೆ ಭೇಟಿ ನೀಡಿ ನಿಮ್ಮೊಂದಿಗೆ ಸಮಸ್ಯೆ ಕುರಿತು ಚರ್ಚಿಸುತ್ತೇನೆಂದು ಹೇಳಿದರು.
ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಸಲಕರಣೆಗಳನ್ನು ವಿತರಣೆ ಮಾಡಿದರು. ಉದ್ಯೋಗ ಮತ್ತು ತರಬೇತಿ ಇಲಾಖೆ ಬೆಳಗಾವಿ ವಿಭಾಗ ಜೆಡಿ ಪಿ. ರಮೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ್ ಚಿದಾನಂದ, ಎಂ. ಪರಮೇಶ್ವರಪ್ಪ, ಎಪಿಎಂಸಿ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ಯುವ ಘಟಕದ ಅಧ್ಯಕ್ಷ ಬಾಬುಬಲಿ ಪಾಟೀಲ್ ಇತರರು ಇದ್ದರು.
--