ಜ್ವಲಂತ ಸಮಸ್ಯೆ ಕುರಿತು ಗಮನ ಹರಿಸಿ: ಡಾ. ನಾಯ್ಕ
ಹೂವಿನಹಡಗಲಿ: ಗ್ರಾಮಾಂತರ ಪ್ರದೇಶಗಳಲ್ಲಿನ ಜ್ವಲಂತ ಸಮಸ್ಯೆಗಳ ಕುರಿತು ಪತ್ರಕರ್ತರು ಪತ್ರಿಕೆಗಳ ಮೂಲಕ ಸರ್ಕಾರದ ಗಮನಕ್ಕೆ ತರಬೇಕೆಂದು ಜೇಸಿ ಡಾ. ಲಕ್ಷ್ಮಣ ನಾಯ್ಕ ಹೇಳಿದರು.
ಇಲ್ಲಿನ ತುಂಗಭದ್ರಾ ಪ್ರೌಢ ಶಾಲೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪತ್ರಿಕಾ ರಂಗದ ಮೇಲೆ ಮಹತ್ವದ ಜವಾಬ್ದಾರಿ ಇದ್ದು, ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ನೈಜ ಮತ್ತು ಸತ್ಯಕ್ಕೆ ಹತ್ತಿರವಾಗಿರುವ ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸಿ, ಬಡವರ ನೋವು ನಲಿವುಗಳಿಗೆ ಸ್ಪಂದಿಸಬೇಕು. ವಿದ್ಯಾರ್ಥಿಗಳು ಪತ್ರಿಕೆ, ನಿಯಾತಕಾಲಿಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಶಿಕ್ಷಕ ಎಸ್. ದ್ವಾರಕೇಶರೆಡ್ಡಿ, ಜಿ. ಆನಂದ ಮಾತನಾಡಿದರು. ಮೇಘಾ ಪ್ರಾರ್ಥಿಸಿದರು. ಸಾಯಿಕುಮಾರ ನಿರ್ವಹಿಸಿದರು. ಪತ್ರಿಕಾ, ವೈದ್ಯ ದಿನಾಚರಣೆ ಅಂಗವಾಗಿ ಪ್ರಬಂಧ, ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.