ನಾಳೆ ವಕೀಲರ ಗ್ರಂಥಾಲಯ ಉದ್ಘಾಟನೆ
ಬಳ್ಳಾರಿ: ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜು. 6ರಂದು ಬೆಳಗ್ಗೆ 10ಕ್ಕೆ ವಕೀಲರ ಗ್ರಂಥಾಲಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಈ ಕಟ್ಟಡವನ್ನು 2011-12ನೇ ಸಾಲಿನ ವಿಧಾನಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಹಾಗೂ ಎಚ್‌ಕೆಡಿಬಿ ಯೋಜನೆಗಳ ಅನುದಾನದಡಿ ನಿರ್ಮಿಸಲಾಗಿದ್ದು, ಹೈಕೋರ್ಟ್ ನ್ಯಾಯಮೂರ್ತಿ ಕೆ. ಶ್ರೀಧರರಾವ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ ಎನ್. ತಿಪ್ಪಣ್ಣ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಭಾಗವಹಿಸಲಿದ್ದಾರೆ. ಪ್ರಧಾನ ಜಿಲ್ಲಾ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಎ.ಜಿ. ಶಿವಕುಮಾರ, ಉಪಾಧ್ಯಕ್ಷ ಕೆ. ಎರ್ರಿಗೌಡ, ಕಾರ್ಯದರ್ಶಿ ಡಿ.ಎಸ್. ಬದರಿನಾಥ, ಸಹ ಕಾರ್ಯದರ್ಶಿ ವಿಜಯಲಕ್ಷ್ಮಿ, ಖಜಾಂಚಿ ಟಿ.ಎಂ. ಜಡೇಶ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ. ಚಂದ್ರಕಲಾ, ಬಿ. ನಾಗರಾಜು, ಕೋನೇರು ನಾಗಭೂಷಣರಾವ್, ಆರ್. ಚಿದಾನಂದ ಸ್ವಾಮಿ, ಜಿ. ವೀರೇಶ ಯಾದವ್, ಕೆ. ಶೇಖರ್, ಜಿ.ಎಂ. ಬಸವರಾಜ, ಮಲ್ಲೇಶ್ ನಾಯಕ್, ಕೆ. ಬಸವರಾಜ ರುದ್ರಪ್ಪ, ಸಾದಿಕ್ ಅಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
11ರಿಂದ ಕುಂದು-ಕೊರತೆ ಸಭೆ
ಬಳ್ಳಾರಿ: ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಉಪ ಲೋಕಾಯುಕ್ತರು ಜು. 11 ಹಾಗೂ 12ರಂದು ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಲಿದ್ದಾರೆ. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಖುದ್ದಾಗಿ ಸಲ್ಲಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.
ನಾಳೆ ಸಾಮೂಹಿಕ ಶನಿ ಶಾಂತಿ ಹೋಮ
ಬಳ್ಳಾರಿ: ಇಲ್ಲಿನ ಸತ್ಯನಾರಾಯಣ ಪೇಟೆಯಲ್ಲಿರುವ ಶ್ರೀ ಶನೇಶ್ವರ ಹಾಗೂ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಶನಿ ತ್ರಯೋದಶಿ ನಿಮಿತ್ತ ಜು. 6ರಂದು ಶನಿವಾರ ಸಾಮೂಹಿಕ ಶ್ರೀ ಶನಿ ಶಾಂತಿ ಹೋಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯ ಮೂಲಕ ಕೋರಿದ್ದಾರೆ.