ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದು ಪದಾಧಿಕಾರಿಗಳ ಪದಗ್ರಹಣ

Mainashree
Updated On : 6 Jul 2013, 10:40 am

ಹೊಸಪೇಟೆ: ರೋಟರಿ ಕ್ಲಬ್, ಇನ್ನರ್ ವ್ಹೀಲ್ ಹಾಗೂ ರೋಟರಿ ಜಿಲ್ಲಾ ಗವರ್ನರ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 6ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ ಎಂದು ರೋಟರಿ ಕ್ಲಬ್ ನೂತನ ಜಿಲ್ಲಾ ಗವರ್ನರ್ ಆರ್. ಗೋಪಿನಾಥ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ವರ್ಷ ಕ್ಲಬ್‌ನಿಂದ ಶಿಕ್ಷಣ ಅಭಿಯಾನ ಆರಂಭಿಸಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತೆರೆಯಲಾಗಿದೆ. ನಗರದ ಗರ್ಲ್ಸ್ ಕಾಲೇಜಿನಲ್ಲಿ ಸಂಜೆ 5ರಿಂದ 6.30ರ ವರೆಗೆ ನಡೆಸಲಾಗುತ್ತಿದೆ. ತಾಲೂಕಿನ ಕೆಲ ಪ್ರಾಥಮಿಕ ಶಾಲೆಯಗಳನ್ನು ಆಯ್ಕೆ ಮಾಡಿಕೊಂಡು ಸುಮಾರು ರು. 30 ಲಕ್ಷ ವೆಚ್ಚದಲ್ಲಿ ಶಾಲೆಗಳಿಗೆ ನೀರು ಶುದ್ಧೀಕರಣ ಉಪಕರಣಗಳನ್ನು ನೀಡುವ ಯೋಜನೆಯೊಂದನ್ನು ಹಾಕಿಕೊಳ್ಳಲಾಗಿದೆ. ರೋಟರಿ ಕ್ಲಬ್ ಸತತ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದರು.
ಹೊಸಪೇಟೆ ರೋಟರಿ ಕ್ಲಬ್ 62 ಕ್ಲಬ್‌ಗಳನ್ನು ಒಳಗೊಂಡಿದೆ. ರಾಜ್ಯದ ಬೀದರ್, ಗುಲ್ಬರ್ಗಾ, ರಾಯಚೂರು, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಅನಂತಪುರ, ಕರ್ನೂಲು, ಕಡಪಾ ಹಾಗೂ ನೆಲ್ಲೂರು ಜಿಲ್ಲೆಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ ಎಂದರು. ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದವರು ಅಭಿವೃದ್ಧಿ ಹೊಂದಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಾ ಬಂದಿದೆ. ಉಚಿತ ಕಣ್ಣಿನ ಚಿಕಿತ್ಸೆಯಲ್ಲಿ ರೋಟರಿ ಕ್ಲಬ್ ನಿರಂತರ ತೊಡಗಿದೆ. ಪ್ರತಿವರ್ಷ ಪದಾಧಿಕಾರಿಗಳ ನೇಮಕದಂತೆ ಈ ಬಾರಿ ಆದ್ಯಕ್ಷರಾಗಿ ಎಚ್. ಶ್ರೀನಿವಾಸ ರಾವ್ ಮತ್ತು ಕಾರ್ಯದರ್ಶಿಯಾಗಿ ಸೈಯದ್ ಮಹ್ಮದ್ ಆಯ್ಕೆಯಾಗಿದ್ದಾರೆ ಎಂದು ಹೇಳಿದರು. ರೋಟರಿ ಅಧ್ಯಕ್ಷ ಎಚ್. ಶ್ರೀನಿವಾಸ್ ರಾವ್, ಜಂಟಿ ಕಾರ್ಯದರ್ಶಿ ಮುನಿವಾಸುದೇವ ರೆಡ್ಡಿ, ದೀಪಕ್ ಜಂತೀಕರ್, ಮಾಜಿ ಅಧ್ಯಕ್ಷ ಸೈಯದ್ ನಾಜೀ ಮುದ್ದೀನ್, ವಿಜಯ್ ಸಿಂಧಗಿ, ಸೀನಂಭಟ್, ಅಗ್ನಿಹೋತ್ರಿ, ಎನ್.ಎಂ. ಅಗ್ನಿಹೋತ್ರಿ ಸುದ್ದಿಗೋಷ್ಠಿಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement