ಸಂಘ, ಸಂಸ್ಥೆ ಸಮಾಜ ನಿರ್ಮಾಣಕ್ಕೆ ಶ್ರಮಿಸಲಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜು. 6
ಸಂಘ-ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ರೋಟರಿ ಕ್ಲಬ್ ಸಮಾಜದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಗುಪ್ತಗಾಮಿನಿಯಂತೆ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ರೋಟರಿ ಕ್ಲಬ್ನ ಅಂತಾರಾಷ್ಟ್ರೀಯ ನಿರ್ದೇಶಕ ಪಿ.ಟಿ. ಪ್ರಭಾಕರ ತಿಳಿಸಿದರು.
ನಗರದ ಮಲ್ಲಿಗೆ ಸಭಾಂಗಣದಲ್ಲಿ ಶನಿವಾರ ನಡೆದ ರೋಟರಿ ಕ್ಲಬ್ನ 2013-14ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೋಟರಿ ಕ್ಲಬ್ನ ಸದಸ್ಯರು ಯಾವುದೇ ಫಲಾಪೇಕ್ಷೆ ಇಲ್ಲದೇ, ನಿಶಕಲ್ಮಶರಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಉತ್ತಮ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮತ್ತು ರೋಟರಿ ಕ್ಲಬ್ ಅಡಿ ಸಂಘಟನೆಯಾಗುತ್ತಿರುವುದರಿಂದ ರೋಟರಿ ಕ್ಲಬ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಹೆಸರು ಪಡೆದು ಉತ್ತಮ ಸಂಸ್ಥೆ ಎಂದು ಖ್ಯಾತಿ ಹೊಂದಿದೆ ಎಂದರು.
ಸೇವೆ ವಿಸ್ತರಣೆ: ರೋಟರಿ ಕ್ಲಬ್ ಮಾಜಿ ಜಿಲ್ಲಾ ಗೌವರ್ನರ್ ಬಿ. ಸುರೇಂದ್ರ ರೆಡ್ಡಿ ಮಾತನಾಡಿ, ದೇಶದಲ್ಲಿ ಪೋಲಿಯೊ ನಿರ್ಮೂಲನೆಯಾಗಲೂ ರೋಟರಿ ಕ್ಲಬ್ಬಿನ ಸೇವೆ ಅತ್ಯಮೂಲ್ಯ. ಸ್ವ ಹಿತಾಸಕ್ತಿಯಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸೇವೆ ವಿಸ್ತರಿಸಿರುವುದು ನಿಜಕ್ಕೂ ಪ್ರಶಂಸನೀಯ ಕಾರ್ಯ. ಸರ್ಕಾರೇತರ ಸಂಸ್ಥೆಯಾಗಿರುವ ರೋಟರಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಹುಬ್ಬಳ್ಳಿಯ ಇನ್ನರ್ ವೀಲ್ನ ಮಾಜಿ ಅಧ್ಯಕ್ಷೆ ಲತಾ ಜಮಖಂಡಿ ಮಾತನಾಡಿ, ಹೊಸಪೇಟೆ ರೋಟರಿ ಹಾಗೂ ಇನ್ನರ್ ವೀಲ್ ಕ್ಲಬ್ಗಳು ಜನೋಪಯೋಗಿ ಕೆಲಸ ಮಾಡುತ್ತಾ ಬಂದಿವೆ. ರೋಟರಿ ಸಂಸ್ಥೆಯು ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಬಡವರ ಸೇವೆಯಲ್ಲಿ ನಿರಂತರ ಸೇವೆ ಮಾಡುತ್ತಾ ಬಂದಿರುವುದು ಉತ್ತಮ ಬೆಳವಣಿಗೆ ಎಂದರು.
ಪದಗ್ರಹಣ: 2013-14ನೇ ಸಾಲಿನ ರೋಟರಿಯ ಜಿಲ್ಲಾ ಗವರ್ನರ್ ಆಗಿ ಗೋಪಿನಾಥ, ಕ್ಲಬ್ ಅಧ್ಯಕ್ಷರಾಗಿ ಎಚ್. ಶ್ರೀನಿವಾಸ ರಾವ್, ಕಾರ್ಯದರ್ಶಿಯಾಗಿ ಸಯ್ಯದ್ ಮಹ್ಮದ್, ಇನ್ನರ್ ವೀಲ್ನ ಅಧ್ಯಕ್ಷೆಯಾಗಿ ಡಾ. ಮಾಧವಿ ದೇವಿ, ಕಾರ್ಯದರ್ಶಿಯಾಗಿ ಮೇಘನಾ ಮಂಜುನಾಥ, ಉಪಾಧ್ಯಕ್ಷೆಯಾಗಿ ವಿದ್ಯಾ ಸಿಂದಗಿ, ಖಜಾಂಚಿಯಾಗಿ ಸುನೀತಾ ಕಿಶೋರ್, ಅಂಜಲಿ ರಾಜಾಪುರ ಅಧಿಕಾರ ಸ್ವೀಕರಿಸಿದರು.
ರೋಟರಿ ಮಾಜಿ ಅಧ್ಯಕ್ಷ ಸಯ್ಯದ್ ನಾಜೀಮುದ್ದೀನ್, ಕಾರ್ಯದರ್ಶಿ ವೈ. ಶ್ರೀನಿವಾಸರಾವ್, ಇನ್ನರ್ ವೀಲ್ ಮಾಜಿ ಅಧ್ಯಕ್ಷೆ ಜಯಶ್ರೀ, ಕಾರ್ಯದರ್ಶಿ ಮಣಿ, ಪದಾಧಿಕಾರಿಗಳಾದ ಅಂಜಲಿ ರಾಜಾಪುರ, ಲತಾ, ಸುರೇಂದ್ರ, ಎಂ.ಎನ್. ಅಗ್ನಿಹೋತ್ರಿ, ವಿಜಯ ಅಗ್ನಿಹೋತ್ರಿ, ವಿಜಯ ಸಿಂಧಗಿ, ಶೀನಂಭಟ್, ನಂದಿನಿ ಚಿಕ್ಕಮಠ, ಶಿಲ್ಪಾ, ರೇಖಾ ಪ್ರಕಾಶ್, ಗೌತಮ್, ಡಾ. ಕೆ.ಜಿ. ಕುಲಕರ್ಣಿ, ಮಹೇಶ್ ರಾಯ್ಕರ್, ಮನ್ಸೂರ್, ಚಂದ್ರಶೇಖರ್ ಇತರರು ಭಾಗವಹಿಸಿದ್ದರು.