ಸದಸ್ಯತ್ವ ಪಡೆಯಲು ಸೂಚನೆ
ಬಳ್ಳಾರಿ: ಬ್ರಾಹ್ಮಣ ಸಮಾಜದ ಪ್ರತಿಯೊಬ್ಬರು ಬ್ರಾಹ್ಮಣ ಸಂಘರ್ಷ ಸಮಿತಿಯ ಸದಸ್ಯತ್ವ ಪಡೆಯಬೇಕು ಎಂದು ಸಮಿತಿಯ ಗೌರವಾಧ್ಯಕ್ಷ ಡಾ.ಬಿ.ಕೆ. ಶ್ರೀನಿವಾಸಮೂರ್ತಿ ಹಾಗೂ ಅಧ್ಯಕ್ಷ ಡಾ. ರಾಧಾಕೃಷ್ಣ ತಿಳಿಸಿದ್ದಾರೆ. ನಗರದ ಸತ್ಯನಾರಾಯಣ ಪೇಟೆಯ ಮುಖ್ಯರಸ್ತೆಯಲ್ಲಿರುವ ಎಂಜಿನಿಯರಿಂಗ್ ಸೇವಾ ಸಂಘದ ಕಟ್ಟದಲ್ಲಿರುವ ಸಮಿತಿ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಎಲ್ಲ ಬ್ರಾಹ್ಮಣ ಸಮುದಾಯದವರು ಸದಸ್ಯತ್ವ ಪಡೆಯಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸದಸ್ಯತ್ವ ಪಡೆಯಬೇಕಾಗಿದೆ ಎಂದರು. ಸಂಘದ ಕಚೇರಿಯು ಸಂಜೆ 6 ಗಂಟೆಯಿಂದ ರಾತ್ರಿ 8.30ರವರೆ ಕಾರ್ಯನಿರ್ವಹಿಸುತ್ತದೆ ಎಂದರು. ಸಂಘದ ಕಾರ್ಯದರ್ಶಿ ಗುರುರಾಜ್ ಮಾತನಾಡಿದರು. ನೌಕರರ ಸಂಘದ ಅಧ್ಯಕ್ಷರಾದ ವೇಣುಗೋಪಾಲ್, ಡಾ. ವಿದ್ಯಾಧರ ಕಿನ್ನಾಳ್, ವಾಸು ಹಾಗೂ ಸರೋಜಾ ಬ್ಯಾತನಾಳ, ವಿಜಯಲಕ್ಷ್ಮಿ, ಲಕ್ಷ್ಮಿ ಪವನ್‌ಕುಮಾರ್, ವಕೀಲರಾದ ಮಹೇಂದ್ರನಾಥ್ ಎಲ್ಲಾ ಬ್ರಾಹ್ಮಣ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.