ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

22ಕ್ಕೆ ಸರ್ಕಾರಿ ನೌಕರರ ಸಂಘದ ಚುನಾವಣೆ

Lingaraj Badiger
Updated On : 9 Jul 2013, 11:51 am

ಕೂಡ್ಲಿಗಿ: ತಾಲೂಕು ಸರ್ಕಾರಿ ನೌಕರರ ಸಂಘದ ವಿವಿಧ ಇಲಾಖೆಗಳ ಕಾರ್ಯಕಾರಿ ಸಮಿತಿ ಆಯ್ಕೆಗೆ ಜು. 22ರಂದು ಬೆಳಗ್ಗೆ 11ರಿಂದ ಸಂಜೆ 4ರ ವರೆಗೆ ಪಟ್ಟಣದ ಬಿಬಿ ತಾಂಡಾ ರಸ್ತೆಯಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಚುನಾವಣೆ ನಡೆಯಲಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಮಾರೇಶ್  ತಿಳಿಸಿದ್ದಾರೆ. ರಾಜ್ಯಾಧ್ಯಕ್ಷರ ಆದೇಶದನ್ವಯ ಚುನಾವಣಾ ವೇಳಾಪಟ್ಟಿ ಸಿದ್ಧಗೊಂಡಿದ್ದು, 2013-18ರ ಅವಧಿಗೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಜು. 11ರಿಂದ 15ರ ವರೆಗೆ ನಾಮಪತ್ರ ವಿತರಣೆ. ಜು. 15ರ ಸಂಜೆ 5ಕ್ಕೆ ನಾಮಪತ್ರ ಸಲ್ಲಿಸಲು ಕಡೇದಿನ.  ನಂತರ ನಾಮಪತ್ರಗಳ ಪರಿಶೀಲನೆ, ಅರ್ಹ ಅಭ್ಯರ್ಥಿಗಳ ಪ್ರಕಟಣೆಯಾಗಲಿದೆ. ಜು. 16ಕ್ಕೆ ನಾಮಪತ್ರ ವಾಪಾಸಾತಿ. ಜು. 22ರಂದು ಚುನಾವಣೆ ಹಾಗೂ ಮತ ಎಣಿಕೆ ನಡೆಯಲಿದೆ ಎಂದರು. ನಾಮಪತ್ರಗಳನ್ನು ತಾಲೂಕು ಯೋಜನಾ ಸಂಘದ ಕಚೇರಿಯಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 9972534936ಗೆ ಸಂಪರ್ಕಿಸಬಹದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement