ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಜೀತ ವಿಮುಕ್ತರಿಗೆ ಅನುದಾನ: ಆಗ್ರಹ

Lingaraj Badiger
Updated On : 9 Jul 2013, 11:51 am

ಹೊಸಪೇಟೆ: ಮಂಡನೆಯಾಗುವ ರಾಜ್ಯ ಬಜೆಟ್‌ನಲ್ಲಿ ಜೀತ ವಿಮುಕ್ತರಿಗೆ ಪ್ರತ್ಯೇಕ ಹಣ ಮೀಸಲಿಡಬೇಕು ಎಂದು ಒತ್ತಾಯಿಸಿ ಜೀತ ವಿಮುಕ್ತ ಕರ್ನಾಟಕ ಜಿಲ್ಲಾ ಸಮಿತಿ ಪದಾಧಿಕಾರಿಗಳು ಶನಿವಾರ ಸಹಾಯಕ ಆಯುಕ್ತರ ಕಚೇರಿ ಮೂಲಕ ಸಿಎಂಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮಧುಗಿರಿಯಲ್ಲಿ 916, ಎಚ್.ಡಿ. ಕೋಟೆಯಲ್ಲಿ 609, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 923 ಮಂದಿ ಜೀತದಾಳುಗಳನ್ನು ಈಗಾಗಲೆ ಜೀತದಿಂದ ವಿಮುಕ್ತಿಗೊಳಿಸಲಾಗಿದೆ. ಆದರೆ ಯಾವುದೇ ಪರಿಹಾರ ನೀಡಿಲ್ಲ. ಪ್ರತಿವರ್ಷ ರಾಜ್ಯಾದ್ಯಂತ ಏಕಕಾಲದಲ್ಲಿ ಜೀತದಾಳುಗಳ ಮರು ಸಮೀಕ್ಷೆ ನಡೆಸಬೇಕು. ವಿಮುಕ್ತರಾದ ಜೀತದಾಳುಗಳಿಗೆ ಈಗ ಜಾರಿಯಲ್ಲಿರುವ ರು. 300 ಮಾಸಾಶನವನ್ನು ರು. 2 ಸಾವಿರಕ್ಕೆ ಹೆಚ್ಚಿಸಬೇಕು. ಜೀತ ವಿಮುಕ್ತರಿಗೆ ಈಗ ನೀಡುತ್ತಿರುವ ರು. 20 ಸಾವಿರವನ್ನು ರು. 2 ಲಕ್ಷಕ್ಕೆ ಹೆಚ್ಚಿಸಬೇಕು. ಜೀತ ನಿರ್ಮೂಲನೆಯ ಸಮಗ್ರ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕವಾಗಿ ಒಬ್ಬ ಹಿರಿಯ ಶ್ರೇಣಿಯ ಅಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಪ್ರತಿವರ್ಷ ಸಂಘಟನೆಯಿಂದ ಗುರುತಿಸಿ, ಅಧಿಕಾರಿಗಳಿಗೆ ಸಲ್ಲಿಸಿದ ಜೀತದಾಳುಗಳ ಪಟ್ಟಿಯನ್ನು ತಿಂಗಳ ಒಳಗಾಗಿ ತನಿಖೆ ನಡೆಸಿ ಬಿಡುಗಡೆಗೊಳಿಸಬೇಕು. ಬಿಡುಗಡೆಗೊಂಡ ಜೀತ ವಿಮುಕ್ತರಿಗೆ ಲಭ್ಯವಿರುವ ಕಡೆ ಸರ್ಕಾರಿ ಭೂಮಿ ಗುರುತಿಸಿ ತಲಾ ಕುಟುಂಬಕ್ಕೆ 5 ಎಕರೆ ಭೂಮಿ ನೀಡಬೇಕು. ಜೀತ ವಿಮುಕ್ತ ಕುಟುಂಬದ ಮಕ್ಕಳಿಗೆ ಮತ್ತು ಬಾಲ ಜೀತದಾಳುಗಳಿಗೆ ವಿಶೇಷ ಅಧ್ಯತೆ ಮೇರೆಗೆ ಪ್ರತಿಷ್ಠಿತ ವಸತಿ ಶಾಲೆಗಳಿಗೆ ಅವಕಾಶ ಕಲ್ಪಿಸಬೇಕು.
ಗುಣತ್ಮಾಕ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು ಹಾಗೂ ಉನ್ನತ ವ್ಯಾಸಂಗಕ್ಕೆ ವಿಶೇಷ ಅನುದಾನ ಮೀಸಲಿರಿಸಬೇಕು ಎನ್ನುವ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜೀತ ವಿಮುಕ್ತ ಜಿಲ್ಲಾ ಸಮಿತಿ ಸಂಚಾಲಕ ಎಂ. ಈರಣ್ಣ, ಜೀತದಾರರಾದ ಎಚ್. ಶಿವಪ್ಪ, ಎಂ. ಬಸವರಾಜ, ಕೆ. ರಾಮಪ್ಪ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement