ನಾಳೆ ಕುಟುಂಬ ಮಿಲನ ಕಾರ್ಯಕ್ರಮ
ಹೊಸಪೇಟೆ: ಭಾರತ ವಿಕಾಸ ಪರಿಷದ್ನ ವಿಜಯನಗರ ಘಟಕದಿಂದ ಆಯೋಜಿಸಿರುವ ಭಾರತ ವಿಕಾಸ ಪರಿಷತ್ನ ಸಂಸ್ಥಾಪನಾ ದಿನ ಮತ್ತು ಕುಟುಂಬ ಮಿಲನ ಕಾರ್ಯಕ್ರಮ ನಗರದ ಮಹಿಳಾ ಸಮಾಜ ಶಾಲೆಯಲ್ಲಿ ಜು. 10ರಂದು ಸಂಜೆ 6.30ಕ್ಕೆ ನಡೆಯಲಿದೆ. ಭಾರತ ವಿಕಾಸ ಪರಿಷದ್ ಅಧ್ಯಕ್ಷ ಕಾಂತಿಲಾಲ್ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ರೋಟರಿ ಕ್ಲಬ್ ಅಧ್ಯಕ್ಷ ಎಚ್. ಶ್ರೀನಿವಾಸ್ ರಾವ್, ಜೀಸಿ'ಸ್ ಅಧ್ಯಕ್ಷ ಕೆ.ಸಿ. ಮನು, ಭಾರತ ವಿಕಾಸ ಪರಿಷತ್ ಕರ್ನಾಟಕ ಉತ್ತರ ಪ್ರಾಂತದ ಉಪಾಧ್ಯಕ್ಷೆ ಡಿ.ಎನ್. ಸುಜಾತಾ ಭಾಗವಹಿಸುವರು ಎಂದು ಪರಿಷತ್ನ ವಿಜಯನಗರ ಘಟಕದ ಪ್ರಧಾನ ಕಾರ್ಯದರ್ಶಿ ಐಲಿ ಮಂಜುನಾಥ, ಪ್ರಾಚಾರ ಪ್ರಮುಖ್ ಬಿ. ನರಸಿಂಹಮೂರ್ತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
15ರಿಂದ ಟೆಲಿಗ್ರಾಮ್ ಸೇವೆ ಸ್ಥಗಿತ
ಬಳ್ಳಾರಿ: ಭಾರತ ಸಂಚಾರ ನಿಗಮ ನಿಯಮಿತ ದೂರವಾಣಿ ಇಲಾಖೆಯಿಂದ ಚಾಲನೆಯಲ್ಲಿದ್ದ ತ್ವರಿತ ತಂತಿ ಸಂದೇಶ (ಖಿಜಟಜ್ಜ್ಠಛಟ ಖಜ್ಠಢ್ಝ್ಛಜ) ಸೇವೆಯನ್ನು 2013ರ ಜು, 15ರಿಂದ ಸ್ಥಗಿತಗೊಳಿಸಲಾಗುವುದು. ಸೇವೆ ಚಾಲನೆಯಲ್ಲಿದ್ದಾಗ ಸಹಕರಿಸಿದ ಎಲ್ಲರಿಗೂ ಇಲಾಖೆಯು ಕೃತಜ್ಞತೆ ಸಲ್ಲಿಸುತ್ತದೆ ಎಂದು ಬಿಎಸ್ಎನ್ಎಲ್ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಜನಸಂಖ್ಯಾ ದಿನಾಚರಣೆ ನಾಳೆ
ಬಳ್ಳಾರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜು. 11ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಹಮ್ಮಿಕೊಂಡಿದ್ದು, ದಿನಾಚರಣೆ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಜಾಥಾ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
15ರಂದು ಜಿಪಂ ಸಭೆ
ಬಳ್ಳಾರಿ: ಜಿಪಂ ಕಚೇರಿಯಲ್ಲಿ ಜು. 15ರಂದು ಬೆಳಗ್ಗೆ 11ಕ್ಕೆ 11ನೇ ಸಾಮಾನ್ಯ ಸಭೆ ನಡೆಯಲಿದೆ. ಜಿಪಂ ಸದಸ್ಯರು ಹಾಗೂ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಾಗಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.