ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶಂಕಿತ ಡೆಂಘೀಗೆ ಇಬ್ಬರ ಸಾವು

Rashmi Kasaragodu
Updated On : 11 Jul 2013, 1:35 am

ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಕಾಸರಕೋಡ ಹೊಸಪಟ್ಟಣದ ಸವಿತಾ ಮಂಜುನಾಥ ನಾಯ್ಕ (18) ಶಂಕಿತ ಡೆಂಘೀಗೆ ಬಲಿಯಾಗಿದ್ದಾಳೆ. ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಜು.9ರಂದು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ಕಡಿಮೆಯಾಗದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆಎಂಸಿಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ. ಇನ್ನೊಂದೆಡೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ತಾಲೂಕಿನ ಹಂಪಸಾಗರದಲ್ಲಿ ಬಾಲಕನೊಬ್ಬ ಬಲಿಯಾಗಿದ್ದಾನೆ. ಗ್ರಾಮದ ನಾಗಲಾಪುರ ವಾರ್ಡ್‌ನ ಪರುಶರಾಮ (12) ಶಂಕಿತ ಡೆಂಘೀಗೆ ಬಲಿಯಾದ ಬಾಲಕ.  
ಪಾರ್ಶ್ವನಾಥ್‌ಗೆ  ಮನ್ನಣೆ
ಬೆಳ್ತಂಗಡಿ: ಅಮೆರಿಕದ ಅಟ್ಲಾಂಟಾ ನಗರದಲ್ಲಿ ಜಾರ್ಜಿಯಾ ರಾಜ್ಯ ವಿವಿಯಲ್ಲಿ ಎಂಬಿಎ, ಎಂಎಸ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಪಾರ್ಶ್ವನಾಥ್ ಅವರಿಗೆ ವಿವಿಯ 100ನೇ ಘಟಿಕೋತ್ಸವ ಸಮಾರಂಭದಲ್ಲಿ ವಿವಿಯ ಬೀಟಾ ಗಾಮಾ ಸಿಗ್ಮಾ ಎಂಬ ಅಂತಾರಾಷ್ಟ್ರೀಯ ಗೌರವ ಸದಸ್ಯತ್ವದ ಮನ್ನಣೆ ನೀಡಲಾಯಿತು. ಇವರು ಉಜಿರೆ ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಉಜಿರೆ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಮಂಜುವಾಣಿ ಮಾಸಪತ್ರಿಕೆಯ ಸಹ ಸಂಪಾದಕ ಪ್ರೊ.ನಾ. ಉಜಿರೆ ದಂಪತಿ ಪುತ್ರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement