ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದು ಹೊಸಪೇಟೆಗೆ ವಿವೇಕಾನಂದ ರಥಯಾತ್ರೆ

Lingaraj Badiger
Updated On : 12 Jul 2013, 11:45 am

ಹೊಸಪೇಟೆ: ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ರಾಜ್ಯಾದ್ಯಂತ ಸ್ವಾಮಿ ವಿವೇಕಾನಂದರ ರಥಯಾತ್ರೆ ಆರಂಭಗೊಂಡಿದ್ದು, ಜು. 12ರಂದು ಮಧ್ಯಾಹ್ನ 3.30ಕ್ಕೆ ಹೊಸಪೇಟೆ ನಗರಕ್ಕೆ ಆಗಮಿಸಲಿದೆ. ನಗರದ ನ್ಯಾಷನಲ್ ಶಾಲೆ ಸಮೀಪ ವಿವೇಕಾನಂದರ ರಥಯಾತ್ರೆಯನ್ನು ಸ್ವಾಗತಿಸಲಾಗುವುದು. ನಂತರ ಇಲ್ಲಿನ ದೀಪಾಯನ ಶಾಲೆ ಆವರಣದಿಂದ ಹೊರಡುವ ಮೆರವಣಿಗೆ ವಾಲ್ಮೀಕಿ ವೃತ್ತ, ಮದಕರಿ ನಾಯಕ ವೃತ್ತ, ಅಂಬೇಡ್ಕರ್ ವೃತ್ತ, ರೋಟರಿ ವೃತ್ತ, ರೀಡಿಂಗ್ ರೂಂ, ವಡಕರಾಯ ವೃತ್ತದಿಂದ ಬಳ್ಳಾರಿ ರಸ್ತೆಯ ರಾಮಕೃಷ್ಣ ಗೀತಾಶ್ರಮದವರಿಗೆ ನಡೆಯಲಿದೆ. ಸಂಜೆ 6ಕ್ಕೆ ಗೀತಾಶ್ರಮದ ಬಳಿ ಸಭೆ ನಡೆಯಲಿದ್ದು, ಬೆಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ತ್ಯಾಗೀಶ್ವರಾನಂದಾಜಿ ಮಹಾರಾಜ್, ಸ್ವಾಮಿ ಸೌಖ್ಯಾನಂದಜಿ ಮಹಾರಾಜ್, ಸ್ವಾಮಿ ಮಹಾಕಾವ್ಯಾನಂದಜಿ ಮಹಾರಾಜ್ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಉಪನ್ಯಾಸ ನೀಡಲಿದ್ದಾರೆ. ಸ್ಥಳೀಯ ಉದ್ಯಮಿ ಕಮಲಾಕ್ಷ ಶಾನಭಾಗ, ಗಣಿ ಉದ್ಯಮಿ ಎಚ್. ಆರ್. ರಂಗನಗೌಡ ಅತಿಥಿಗಳಾಗಿ ಭಾಗವಹಿಸುವರು ಎಂದು ಸ್ಥಳೀಯ ರಾಮಕೃಷ್ಣ ಗೀತಾಶ್ರಮದ ಸ್ವಾಮಿ ಸುಮೇಧಾನಂದಜಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
20ರಂದು ಸುಗಮ ಸಂಕೀರ್ತನೆ
ಬಳ್ಳಾರಿ: ಬಳ್ಳಾರಿ ಕಲ್ಚರಲ್ ಆ್ಯಕ್ಟಿವಿಟೀಸ್ ಅಸೋಸಿಯೇಷನ್, ತಿರುಪತಿ ತಿರುಮಲ ದೇವಸ್ಥಾನದ ಅನ್ನಮಾಚಾರ್ಯ ಪ್ರಾಜೆಕ್ಟ್ ವತಿಯಿಂದ ಪದಕವಿತಾ ಪಿತಾಮಹ ಅನ್ನಮಾಚಾರ್ಯರ ಸುಗಮ ಸಂಕೀರ್ತನೆ ಕಾರ್ಯಕ್ರಮವನ್ನು ನಗರದ ರಾಘವ ಕಲಾಮಂದಿರದಲ್ಲಿ ಜು. 20ರಂದು ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ. ಶಾಸಕ ಅನಿಲ್ ಎಚ್. ಲಾಡ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಸೋಸಿಯೇಷನ್‌ನ ಅಧ್ಯಕ್ಷ ಶೀಲಾ ಬ್ರಹ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement