ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಾಳೆ ಬಜೆಟ್ ವಿರೋಧಿಸಿ ಧರಣಿ

Vishwanath S
Updated On : 14 Jul 2013, 12:12 pm

ಹಗರಿಬೊಮ್ಮನಹಳ್ಳಿ: ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ದೇವದಾಸಿ ಮಹಿಳೆಯರ ಬೇಡಿಕೆಗಳನ್ನು ಸಂಪೂರ್ಣ ಕಡೆಗಣಿಸಿದ್ದು, ರಾಜ್ಯ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ಜು. 15ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಾಂಕೇತಿಕ ಧರಣಿ ನಡೆಸುವ ಮೂಲಕ ದೇವದಾಸಿ ವಿರೋಧಿ ಬಜೆಟ್‌ನ್ನು ಖಂಡಿಸಲಾಗುವುದು ಎಂದು ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯಾಧ್ಯಕ್ಷೆ ಬಿ. ಮಾಳಮ್ಮ ಹೇಳಿದ್ದಾರೆ.
ಮಾಸಿಕ ಸಹಾಯ ಧನ ಹೆಚ್ಚಳ, ವಯಸ್ಸಿನ ಮಿತಿ ರದ್ದು, ವಸತಿ, ಕೃಷಿಭೂಮಿ ಸೇರಿದಂತೆ ದೇವದಾಸಿಯರ ಕಲ್ಯಾಣಕ್ಕೆ ಸಂಭಂದಿಸಿದ ಹಲವು ಬೇಡಿಕೆಗಳ ಈಡೇರಿಕೆಗಾಗಿ ನಮ್ಮ ಸಂಘ ನೂರಾರು ಸಲ ಹೋರಾಟ, ಪ್ರತಿಭಟನೆ ಮಾಡಿದೆ. ಆದರೆ ಶುಕ್ರವಾರದ ಬಜೆಟ್‌ನಲ್ಲಿ  ದೇವದಾಸಿಯರಿಗೆ ಪ್ರಸಕ್ತವಾಗಿ ನೀಡುವ ನಾಲ್ಕು ನೂರು ಮಾಸಿಕ ಸಹಾಯಧನಕ್ಕೆ ಒಂದು ನೂರು ಸೇರಿಸಿ ಅದನ್ನು ಐದು ನೂರು ರುಪಾಯಿಗೆ ಏರಿಸಿದ್ದನ್ನು ಬಿಟ್ಟರೆ ದೇವದಾಸಿ ಕಲ್ಯಾಣಕ್ಕೆ ಸಂಭಂದಿಸಿದಂತೆ ಬೇರೆನೂ ಸಿಕ್ಕಿಲ್ಲ. ವಾಸ್ತವಾಗಿ ರು. 1500 ಮಾಸಿಕ ಸಹಾಯಧನ ನೀಡಬೇಕೆಂಬುವುದು ನಮ್ಮ ಬೇಡಿಕೆಯಾಗಿತ್ತು. ಹೀಗಾಗಿ ಇದೊಂದು ಅತ್ಯಂತ ನಿರಾಶದಾಯಕ ಬಜೆಟ್ ಎಂದು ಟೀಕಿಸಿದ್ದಾರೆ.

18ರಿಂದ ಉಚಿತ ಶಸ್ತ್ರಚಿಕಿತ್ಸಾ ಶಿಬಿರ
ಹಗರಿಬೊಮ್ಮನಹಳ್ಳಿ: ರೋಟರಿ ಕ್ಲಬ್, ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ, ಬೆಂಗಳೂರಿನ ವಿವೇಕಾನಂದ ಕಣ್ಣಾಸ್ಪತ್ರೆ ಸೇವಾಶ್ರಮ ಸಂಯುಕ್ತವಾಗಿ ಎಂ. ರಾಜಶೇಖರ ರೆಡ್ಡಿ ಸ್ಮರಣಾರ್ಥ ಮತ್ತು ಪೂಜಾನರ್ಸೀಂಗ್ ಹೊಂನ 25ನೇ ವಾರ್ಷಿಕೋತ್ಸವದ ನಿಮಿತ್ತ ಜು. 18ರಿಂದ 21ರ ವರೆಗೆ ಪಟ್ಟಣದ ರಾಮನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ  ಕ್ಲಬ್ ಅಧ್ಯಕ್ಷ ಅಂಬಾಡಿ ನಾಗರಾಜ ತಿಳಿಸಿದ್ದಾರೆ. ಜು. 18ರಂದು ನೋಂದಣಿ, ಪರೀಕ್ಷೆ ಮಾಡಲಾಗುತ್ತದೆ. ಜು. 19, 20 ಹಾಗೂ21ರಂದು ಶಸ್ತ್ರಚಿಕಿತ್ಸೆ ನಡೆಸಲಾಗುವುದ. ನುರಿತ ವೈದ್ಯರು, ಶಸ್ತ್ರಚಿಕಿತ್ಸಕರು ಶಿಬಿರದಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರು ಶಿಬಿರವನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂದು ಕೋರಿದ್ದಾರೆಯ ಹೆಚ್ಚಿನ ಮಾಹಿತಿಗೆ ಅಂಬಾಡಿ ನಾಗರಾಜ- 9448380336, ಜಿ. ಲಕ್ಷ್ಮಿಪತಿ- 9448460468 ಹಾಗೂ ಚಿದ್ರಿ ಅಮರನಾಥ- 9448381021ನ್ನು ಸಂಪರ್ಕಿಸಬಹುದು.

ವ್ಯಕ್ತಿಗೆ ವಂಚನೆ: ದೂರು ದಾಖಲು
ಬಳ್ಳಾರಿ: ಸ್ಪೆಕ್ಟ್ರಂ ಇನ್ಫೋ ಪ್ರೈವೇಟ್ ಲಿಮಿಟೆಡ್ ಕಂಪನಿಯು 3ಜಿ ಟವರ್ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿ ಗ್ರಾಹಕನೊಬ್ಬನಿಂದ ರು. 65,400 ಪಡೆದು ಟವರ್ ಹಾಕದೆ, ಸಂಪರ್ಕಕ್ಕೆ ಸಿಗದೆ ಮೋಸ ಮಾಡಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಸ್ಪೆಕ್ಟ್ರಂ ಇನ್ಫೋ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಪತ್ರಿಕೆಯೊಂದರಲ್ಲಿ 3ಜಿ ಟವರ್ ಸ್ಥಾಪನೆ ಮಾಡುವ ಕುರಿತು ಜಾಹಿರಾತು ಪ್ರಕಟಣೆ ನೀಡಿದ್ದರು. ಜಾಹಿರಾತನ್ನು ನೋಡಿದ ಹೊಸಪೇಟೆಯ ಎಂ.ಕೆ. ಸೈಯದ್ ಅವರು ಜಾಹೀರಾತಿನಲ್ಲಿನ ಸೂಚನೆಯಂತೆ ರು. 3,350ನ್ನು ಮೊದಲು ಡೆಪಾಜಿಟ್ ಮಾಡಿದ್ದಾನೆ. ಕಂಪನಿ ಹೆಸರಿನಲ್ಲಿ ಉತ್ತರಪ್ರದೇಶದಿಂದ ಬಾಂಡ್ ಪೇಪರ್ ಬಂದಿದೆ. ನಂತರ ಕಂಪನಿಯವರು ಫೋನ್ ಮಾಡಿ ರು. 41,500 ಕಟ್ಟಬೇಕೆಂದು ತಿಳಿಸಿದ್ದರಿಂದ ಆ ಹಣವನ್ನು ಜಮಾ ಮಾಡಿದ್ದಾನೆ. ಒಪ್ಪಂದದಂತೆ ಸೈಯದ್‌ಗೆ ಬರಬೇಕಾದ ರು. 53,00,000 ಹಣ ಪಡೆಯಲು ಅದರ ಕಮಿಷನ್ ರು. 10,550 ಸೇರಿ ಒಟ್ಟು ರು. 65,400 ಜಮಾ ಮಾಡಿದ್ದಾನೆ. ನಂತರದ ದಿನಗಳಲ್ಲಿ ಕಂಪನಿಯವರು ಸೈಯದ್ ಅವರಿಗೆ ಯಾವುದೇ ಸಂಪರ್ಕ ಮಾಡಿಲ್ಲ. ಕಂಪನಿಯವರು ಸುಳ್ಳು ಜಾಹಿರಾತು ನೀಡಿ ಮೋಸ ಮಾಡಿದ್ದಾರೆ ಎಂದು ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement