ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕರವೇಗೆ ಹಲವು ಯುವಕರ ಸೇರ್ಪಡೆ

Lingaraj Badiger
Updated On : 15 Jul 2013, 11:46 am

ಬಳ್ಳಾರಿ:  ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ)ಗೆ ನಗರದ 15, 16ನೇ ವಾರ್ಡ್ ಹಾಗೂ ರೂಪನಗುಡಿ ರಸ್ತೆ ಪ್ರದೇಶದ ಎನ್.ವಿ. ಶಿವಣ್ಣ ಮತ್ತು ಹಲವಾರು ಯುವಕರು ಈಚೆಗೆ  ಸೇರ್ಪಡೆಯಾದರು.
ಕರವೇ ಜಿಲ್ಲಾ ಘಟಕದ ಕಚೇರಿಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಅನೇಕ ಯುವಕರು ಸೇರ್ಪಡೆಯಾದರು. ಕರವೇ ಜಿಲ್ಲಾಧ್ಯಕ್ಷ ಅದ್ದಿಗೇರಿ ರಾಮಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡದ ಬಗ್ಗೆ ಅರಿವು ಮೂಡಿಸುವಲ್ಲಿ ಕರವೇಯ ಎಲ್ಲ ಕಾರ್ಯಕರ್ತರು ಮುಂದಾಗಬೇಕು ಎಂದು ಕರೆ ನೀಡಿದರು. ಕರವೇ ಬಳ್ಳಾರಿ ನಗರ ಘಟಕದ ಅಧ್ಯಕ್ಷ ಜೆ.ವಿ. ಮಂಜುನಾಥ ಮಾತನಾಡಿ, ಕನ್ನಡದ ನೆಲದಲ್ಲಿ ಜನಿಸಿರುವ ನಾವೆಲ್ಲರು ಭಾಗ್ಯವಂತರು. ಕನ್ನಡ ನಾಡು, ನುಡಿ, ಜಲ, ಗಡಿ ಸೇರಿದಂತೆ ನಾಡಿನ ಸಂರಕ್ಷಣೆಯ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನಿಗೂ ಇದೆ ಎಂದು ಹೇಳಿದರು.
ಕರವೇ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಚಂದ್ರಶೇಖರ ಸ್ವಾಮಿ, ದಾನಪ್ಪ ಗುತ್ತೇವಾರ್, ಗೋಪಾಲಕೃಷ್ಣ, ಜಾಸ್ವ, ಕೊಂಡಯ್ಯ, ಎಚ್. ವಿರೂಪಾಕ್ಷಯ್ಯ ಸ್ವಾಮಿ, ಮುಖಂಡರಾದ ಮಲ್ಲಿಕಾರ್ಜುನ, ಉಮೇಶ್, ರಘುರಾಮ್, ಶ್ರೀರಾಮುಲು, ಶ್ರೀಧರ, ಪಿ. ಗೋಪಾಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement