ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಛಾಯಾಜ್ಯೋತಿಗೆ ಅದ್ಧೂರಿ ಸ್ವಾಗತ

Lingaraj Badiger
Updated On : 15 Jul 2013, 11:46 am

ಕೂಡ್ಲಿಗಿ: ನೆನಪಿನ ಮೆಲುಕು ಹಾಕಲು ಛಾಯಾಚಿತ್ರ ಉತ್ತಮ ಸಾಕ್ಷಿಯಾಗಲಿದೆ. ಅಂತಹ ಛಾಯಾಚಿತ್ರ ತೆಗೆಯುವ ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದಾರೆ. ಅವರ ಕಲ್ಯಾಣಕ್ಕೆ ಹೆಚ್ಚಿನ ಸೌಲಭ್ಯ ಸರ್ಕಾರದಿಂದ ಸಿಗುವಂತಾಗಲಿ ಎಂದು ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಸ್.ಎಂ. ನಿರಂಜನಸ್ವಾಮಿ ಹೇಳಿದರು.
ಬಳ್ಳಾರಿಯಿಂದ ಪಟ್ಟಣಕ್ಕೆ ಆಗಮಿಸಿದ ಛಾಯಾಜ್ಯೋತಿ ತಂಡವನ್ನು ಸ್ವಾಗತಿಸಿ, ನಂತರ ಇಲ್ಲಿನ ಗಾಂಧೀಜಿ ಪವಿತ್ರ ಚಿತಾಭಸ್ಮ ಸ್ಮಾರಕದ ಬಳಿ ಮಾತನಾಡಿದರು. ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯದ ಫೋಟೋಗ್ರಪಿ ಅಸೋಷಿಯೇಶನ್ ವತಿಯಿಂದ ಜು. 12ರಂದು ಛಾಯಾಚಿತ್ರ ವಸ್ತುಪ್ರದರ್ಶನ ನಡೆಯಲಿದೆ. ಇದರಿಂದ ಸಿಗುವ ಲಾಭವು ಫೋಟೋಗ್ರಾಫರ್‌ಗಳ ಕಲ್ಯಾಣನಿಧಿಗೆ ಬಳಸಿಕೊಳ್ಳಲು ಯೋಚಿಸಲಾಗಿದೆ ಎಂದು ತಿಳಿಸಿದರು.  ಛಾಯಾಜ್ಯೋತಿ ತಂಡ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಂಚರಿಸಿ ದಾವಣಗೆರೆ, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರು ತಲುಪಲಿದೆ ಎಂದರು. ಉಜ್ಜಿನಿ ರವಿಕುಮಾರ್, ದಾದಾಪೀರ್, ಮಂಜುನಾಥ, ವಿಶ್ವನಾಥ ಶಾಸ್ತ್ರಿ, ರಮೇಶ್, ಅಂಗಡಿ ವೀರೇಶ್, ಕೊಟ್ರೇಶ್, ವೆಂಕಟೇಶ್, ಆನಂದಸ್ವಾಮಿ ಸೇರಿದಂತೆ ಅನೇಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement