ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಿವೃತ್ತ ನೌಕರರಿಗೆ ಸನ್ಮಾನ

Lingaraj Badiger
Updated On : 15 Jul 2013, 11:46 am

ಬಳ್ಳಾರಿ: ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ವತಿಯಿಂದ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಸಂಘದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಂಘದ ಅಜೀವ ಸದಸ್ಯರಾಗಿ, ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಾಗಪ್ಪ, ಬಿ.ಕೃಷ್ಣಪ್ಪ, ವೈ.ಸಿ. ತಾಯಣ್ಣ, ಸಿ. ಪ್ರಹ್ಲಾದ್ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ಪ್ರಮುಖ ಡಾ. ಬಿ.ಆರ್ ಅಂಬೇಡ್ಕರ್ ಫೆಲೋಷಿಪ್ ಪಡೆದ ಸಂಘದ ಉಪಾಧ್ಯಕ್ಷೆ ಎನ್.ಡಿ. ವೆಂಕಮ್ಮ ಅವರನ್ನು ಸಂಘದ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್‌ಕುಮಾರ್ ಭಾಗವಹಿಸಿದ್ದರು. ಬಳ್ಳಾರಿ ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ವಿ. ಎರುಕಲ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು, ಅನೇಕ ದಲಿತ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸಂಘದ ಕಾರ್ಯದರ್ಶಿ ಎಚ್. ಹೊನ್ನೂರಪ್ಪ ನಿರೂಪಿಸಿ, ವಂದಿಸಿದರು.
ಅನ್ನದಾನ ಕಾರ್ಯಕ್ರಮ
ಬಳ್ಳಾರಿ: ಜೈ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ನಗರದ ಮೇರಿ ಚರ್ಚ್ ಸಮೀಪವಿರುವ ಅನಾಥಾಶ್ರಮದಲ್ಲಿ ಆಶ್ರಯ ಪಡೆದಿರುವ ಅನಾಥ ಮಕ್ಕಳಿಗೆ ಅನ್ನದಾನ ಕಾರ್ಯಕ್ರಮವನ್ನು ಗುರುವಾರ ಏರ್ಪಡಿಸಲಾಗಿತ್ತು. ಜೈ ಕನ್ನಡ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಜಾನಕಿ ರಾಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ ಈಶ್ವರಪ್ಪ, ಜಿಲ್ಲಾಧ್ಯಕ್ಷ ಕೆ. ಶ್ಯಾಮ್ ಸುಂದರ್ ಅವರು ಬಡ ಮಕ್ಕಳಿಗೆ ಆಹಾರ ವಿತರಿಸುವುದರೊಂದಿಗೆ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ ಈಶ್ವರಪ್ಪ, ಜೈ ಕನ್ನಡ ರಕ್ಷಣಾ ವೇದಿಕೆಯು ಮುಂದಿನ ದಿನಗಳಲ್ಲಿ ಇಂತಹ ಹಲವಾರು ಸಾಮಾಜಿಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಹಾಗೂ ಸಂಘಟನೆಯನ್ನು ರಾಜ್ಯ ಮಟ್ಟದಲ್ಲಿ, ಜಿಲ್ಲಾ, ತಾಲೂಕು, ಗ್ರಾಮ ಮಟ್ಟದಲ್ಲಿ ಬಲಪಡಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿ.ರಾಮು, ಲಕ್ಷ್ಮಣ್ ನಾಯ್ಕ್, ಸುರೇಶ್ ನಾಯ್ಕ್, ರವಿಶಂಕರ, ಪೆಂಚಲಯ್ಯ, ಕೆ. ಆನಂದ್, ಜಿ.ಎಂ ಪ್ರದೀಪ್ ಮತ್ತಿತರರು ಸೇರಿದಂತೆ ಅನಾಥಾಲಯದ ಶಿಕ್ಷಕರು ಉಪಸ್ಥಿತರಿದ್ದರು.
ತರಬೇತಿಗೆ ಅರ್ಜಿ ಆಹ್ವಾನ
ಬಳ್ಳಾರಿ: ಬಳ್ಳಾರಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ವಿವಿಧ ವೃತ್ತಿ ತರಬೇತಿ ಪಡೆಯಲು ಮರು ಪ್ರವೇಶಕ್ಕಾಗಿ ಎಸ್ಸೆಸ್ಸೆಲ್ಸಿ-ಪಿಯುಸಿ ಪಾಸಾದ ಅಭ್ಯರ್ಥಿಗಳಿಂದ ಹೊಸದಾಗಿ ಅರ್ಜಿ ಆಹ್ವಾನಿಸಿದೆ. ಮಾಹಿತಿಗಾಗಿ ಪ್ರಾಚಾರ್ಯರು, ಕೈಗಾರಿಕಾ ತರಬೇತಿ ಸಂಸ್ಥೆ, ರೇಡಿಯೋ ಪಾರ್ಕ್ ಇವರನ್ನು ಅಥವಾ ದೂ.ಸಂ 08392-240072 ಇಲ್ಲವೇ ಜಾಲತಾಣ ಢಿಢಿಢಿ.್ಜ್ಝಡ್ಝಿಛಿಜಟಟಛ್ಠಣ.್ಛ್ಟ ಸಂಪರ್ಕಿಸಿ.

ಜನ್ಮದಿನಾಚರಣೆ: ಹಣ್ಣು-ಬ್ರೆಡ್ ವಿತರಣೆ
ಬಳ್ಳಾರಿ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಅವರ 63ನೇ ಜನ್ಮದಿನಾಚರಣೆ ನಿಮಿತ್ತ ನಗರದ ವಿಮ್ಸ್ ಆಸ್ಪತ್ರೆ ಸಮೀಪದ ಮದರ್ ತೆರೆಸಾ ರಿಹಾಬಿಲಿಟೇಷನ್ ಸೆಂಟರ್‌ನಲ್ಲಿ ಆಶ್ರಯ ಪಡೆದಿರುವವರಿಗೆ ಕಾಂಗ್ರೆಸ್ ಮುಖಂಡರು ಬುಧವಾರ ಹಣ್ಣು-ಬ್ರೆಡ್ ವಿತರಿಸಿದರು. ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ. ರಾಮ್‌ಪ್ರಸಾದ್, ಸಿ. ಚಂದ್ರ, ದಳವಾಯಿ ಸಿದ್ದಪ್ಪ, ಬ್ರಹ್ಮಯ್ಯ, ಬೆಣಕಲ್ಲು ಬಸವರಾಜ, ಶ್ರೀಹರಿ, ಹುಮಾಯುನ್ ಖಾನ್, ಜಿ.ಜೆ ರವಿಕುಮಾರ್, ಎಸ್. ನಾಗರಾಜ್ ಹಾಗೂ ಇತರರು ಸೆಂಟರ್‌ನಲ್ಲಿ ಆಶ್ರಯ ಪಡೆದಿರುವವರಿಗೆ ಹಣ್ಣು-ಬ್ರೆಡ್ ವಿತರಿಸುವ ಮೂಲಕ ಕೆ.ಸಿ. ಕೊಂಡಯ್ಯ ಅವರ ಜನ್ಮದಿನ ಆಚರಿಸಲಾಯಿತು. ತದನಂತರ ಕಾಂಗ್ರೆಸ್ ಮುಖಂಡರು ನಗರದ ವಿಮ್ಸ್ ಆಸ್ಪತ್ರೆಗೆ ತೆರಳಿ ಇಲ್ಲಿ ದಾಖಲಾಗಿರುವ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement