ಬಳ್ಳಾರಿ; ಕಸಾಪ ಕವಿ ಮನ ಮನೆ ಕಾರ್ಯಕ್ರಮ
ಬಳ್ಳಾರಿ: ಕಸಾಪ ಜಿಲ್ಲಾ ಘಟಕ ಕವಿ ಮನ, ಮನೆಯೊಂದಿಗೆ ಕಸಾಪ- 6 ಕಾರ್ಯಕ್ರಮವನ್ನು ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕುವೆಂಪು ನಗರದ ಹುಲಿಕಟ್ಟಿ ಚನ್ನಬಸಪ್ಪ ಅವರ ನಿವಾಸದಲ್ಲಿ ಏರ್ಪಡಿಸಿದೆ. ಕಸಾಪ ಸಿರುಗುಪ್ಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ನಾ.ಮ. ಬಸವರಾಜಯ್ಯ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ಸಿರಿಗೇರಿ ಎರ್ರಿಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಿರುಗುಪ್ಪದ ಲೇಖಕ ಹುಲಿಕಟ್ಟಿ ಚನ್ನಬಸಪ್ಪ ಇರುವರು. ಎಂ. ಪಂಪಾಪತಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.