ಹಾವು ಕಡಿದು ಬಾಲಕಿ ಸಾವು
ಕುರುಗೋಡು: ಕುರುಗೋಡು ಸಮೀಪದ ಶ್ರೀನಿವಾಸ ನಗರ ಕ್ಯಾಂಪ್ನಲ್ಲಿ ರಾತ್ರಿ ಮಲಗಿರುವ ಬಾಲಕಿಯೋರ್ವಳಿಗೆ ಹಾವು ಕಚ್ಚಿದ ಪರಿಣಾಮ ಆ ಬಾಲಕಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಶ್ರೀನಿವಾಸ ನಗರ ಕ್ಯಾಂಪಿನ ವಿ. ಪವಿತ್ರಾ (6) ಎನ್ನುವ ಬಾಲಕಿ ಮೃತಪಟ್ಟಿದ್ದಾಳೆ. ಶನಿವಾರ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಬಾಲಕಿಗೆ ಹಾವು ಕಚ್ಚಿದ್ದು, ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾಳೆ. ಈಕೆ ಕುರುಗೋಡು ಪಟ್ಟಣದ ವಿದ್ಯಾ ವಸತಿ ಶಾಲೆಯ ವಿದ್ಯಾರ್ಥಿಯಾಗಿದ್ದಾಳೆ.
ಶಾಲಾ ವ್ಯವಸ್ಥಾಪಕರು ಹಾಗೂ ಆಡಳಿತ ಮಂಡಳಿಯವರು ಬಾಲಕಿ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
--