ಹೊಸಪೇಟೆಯಲ್ಲಿ ಬಾಲಕ ಸಾವು
ಹೊಸಪೇಟೆ: ಮಳೆ ನೀರಿನ ರಭಸಕ್ಕೆ ಚರಂಡಿಯಲ್ಲಿ ಓರ್ವ ಬಾಲಕ ಕೊಚ್ಚಿ ಹೋಗಿ ಮೃತಪಟ್ಟಿದ್ದು, ಇನ್ನೊಬ್ಬ ಜೀವಾಪಾಯದಿಂದ ಪಾರಾಗಿರುವ ಘಟನೆ ನಗರದ ಚಪ್ಪರದಳ್ಳಿಯಲ್ಲಿ ಸೋಮವಾರ ಸಂಜೆ ನಡೆದಿದೆ.
ಸ್ಥಳೀಯ ನಿವಾಸಿ ಕರಣ್ ಸಿಂಗ್ ಅವರ ಪುತ್ರ ರಿತೀಶ್ ಸಿಂಗ್ (6) ಮೃತಪಟ್ಟ ಬಾಲಕ. ಇನ್ನೊಬ್ಬ ನಿವಾಸಿ ಬಲಸಿಂಗ್ ಅವರ ಪುತ್ರ ಪೂರನ್ ಸಿಂಗ್ (6) ಜೀವಾಪಾಯದಿಂದ ಪಾರಾಗಿದ್ದಾನೆ. ಸ್ಥಳೀಯ ರೋಸಬಡ್ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದ ಇವರು, ಬಸ್ ಇಳಿದು ಮನೆಗೆ ನಡೆದುಕೊಂಡು ಹೋಗುವಾಗ ಮಳೆ ನೀರಿನ ರಭಸಕ್ಕೆ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದರು. ಇನ್ನೊಬ್ಬ ಬಾಲಕ ಪೂರನ್ ಸಿಂಗ್‌ನನ್ನು ಸ್ಥಳೀಯರು ಬದುಕುಳಿಸಿದ್ದಾರೆ.