ಕೊಂಡಯ್ಯ ಹುಟ್ಟಹಬ್ಬ: ರಕ್ತದಾನ ಶಿಬಿರ
ಬಳ್ಳಾರಿ: ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಅವರ 64ನೇ ಜನ್ಮದಿನಾಚರಣೆ ನಿಮಿತ್ತ ಜಿಲ್ಲಾ ನೇಕಾರರ ಒಕ್ಕೂಟದ ವತಿಯಿಂದ ನಗರದ ಪದ್ಮಸಾಲಿ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರ ಹಾಗೂ ಅಧಾರ್ ನೋಂದಣಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರಾಜ್ಯ ಕಾರ್ಮಿಕ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ 50ನೇ ಬಾರಿ ರಕ್ತದಾನ ಮಾಡಿದ ದೊಡ್ಡಗಟ್ಟೆ ಶಿವಪ್ಪ ಅವರನ್ನು ಸಚಿವ ಪರಮೇಶ್ವರ ನಾಯ್ಕ ಗೌರವಿಸಿ, ಸನ್ಮಾನಿಸಿದರು. ನಂತರ ಬಳ್ಳಾರಿ ಜಿಲ್ಲಾ ನೇಕಾರರ ಒಕ್ಕೂಟದಿಂದ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ವಿಮ್ಸ್ ನಿರ್ದೇಶಕ ಲಕ್ಷ್ಮಿನಾರಾಯಣ, ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯ ಸುಧಾಕರ ದೇಸಾಯಿ, ನೈರುತ್ಯ ರೇಲ್ವೆ ಸದಸ್ಯ ಸಿ. ಚಂದ್ರಶೇಖರ್ ಅವರನ್ನು ಸನ್ಮಾನಿಸಿಲಾಯಿತು. ಶಿಬಿರದಲ್ಲಿ ಕೊಂಡಯ್ಯ ಅವರ ಅನೇಕ ಅಭಿಮಾನಿಗಳು ರಕ್ತದಾನ ಮಾಡಿದರು.
ಈ ಸಂಧರ್ಭದಲ್ಲಿ ಬಳ್ಳಾರಿ ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ದೇವಾನಂದ್, ಶೀಲಾ ಬ್ರಹ್ಮಯ್ಯ, ರಾಜೇಶ್, ಸುರೇಶ್, ಎಸ್. ಉದಯ್‌ಕುಮಾರ, ಗುರುಶಾಂತ್, ಶ್ರೀಧರಮೂರ್ತಿ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಇದ್ದರು.