ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗ್ರಾಪಂ ಸದಸ್ಯನಿಂದ ಮಾನಭಂಗಕ್ಕೆ ಯತ್ನ

Mainashree
Updated On : 17 Jul 2013, 12:11 pm

ಹೂವಿನಹಡಗಲಿ: ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಕುಡಿದ ಅಮಲಿನಲ್ಲಿ ವಿವಾಹಿತ ಮಹಿಳೆಯೊಬ್ಬಳ ಮೇಲೆ ಮಧ್ಯರಾತ್ರಿ ಮಾನಭಂಗಕ್ಕೆ ಯತ್ನಿಸಿದ ಘಟನೆ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಜರುಗಿದೆ.
ಸೋಮವಾರ ರಾತ್ರಿ 2.30ರ ಸಮಯದ ಮಕರಬ್ಬಿ ಗ್ರಾಪಂ ಹಾಲಿ ಸದಸ್ಯ ಕಿರಣಕುಮಾರ್ ಎಂಬಾತ ಕುಡಿದ ಅಮಲಿನಲ್ಲಿ ಅದೇ ಗ್ರಾಮದ ಮನೆಯೊಂದರ ಕಟ್ಟೆಯ ಮೇಲೆ ಮಲಗಿದ್ದ 32 ವರ್ಷ ವಯಸ್ಸಿನ ಮಹಿಳೆ ಸೀರೆ ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ.
ಆ ಸಂದರ್ಭದಲ್ಲಿ ಮಹಿಳೆ ಕೂಗಾಡಿದ್ದರಿಂದ ಪಕ್ಕದ ದೇವಸ್ಥಾನದಲ್ಲಿ ಮಲಗಿದ್ದ ಆಕೆಯ ಪತಿ ಎದ್ದು ಬಂದು ರಕ್ಷಿಸಿದ್ದಾನೆ. ಆರೋಪಿ ಕಿರಣಕುಮಾರ್ ತಪ್ಪಿಸಿಕೊಂಡು ಸೋಮವಾರ ಬೆಳಗಿನ ಜಾವದಿಂದಲೇ ತಲೆ ಮರೆಸಿಕೊಂಡಿದ್ದಾನೆ.  
ಈ ಕುರಿತು ಹಿರೇಹಡಗಲಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಯ ಬಂಧನಕ್ಕೆ ಶೋಧಕಾರ್ಯ ಮಂದುವರಿದಿದೆ ಎಂದು ಪಿಎಸ್‌ಐ ಮಹೇಂದ್ರ ಕುಮಾರನಾಯ್ಕ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement